ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಜಾಕೇಟ್‌ ವಿತರಿಸಿಸಿದ ಗೃಹರಕ್ಷಕದಳ ಡಿಐಜಿಪಿ ಎಸ್ ಸವಿತಾ

ಬೆಳಗಾವಿ: ಗೃಹರಕ್ಷಕದಳ ಡಿಐಜಿಪಿ ಎಸ್. ವಿ. ಸವಿತಾ ಅವರು ಬೆಳಗಾವಿ ನಗರದ ಗೃಹರಕ್ಷಕದಳದ ಕಚೇರಿಗೆ ಭೇಟಿ ನೀಡಿದರು.ಬೆಳಗಾವಿಯ ಜಿಲ್ಲಾ ಗೃಹರಕ್ಷಕದಳದ ಕಚೇರಿಗೆ ಭೇಟಿ ನೀಡಿದ ಅವರು ಶಸ್ತ್ರ ಸಹಿತ ಗೌರವ ವಂದನೆಯನ್ನು ಸ್ವೀಕರಿಸಿ ಕಚೇರಿಯಲ್ಲಿನ ದಾಖಲೆಗಳನ್ನು ಪರಿಶೀಲನೆ ಮಾಡಿದರು.

ಇದೇ ಸಂದರ್ಭದಲ್ಲಿ ಹೊಸದಾಗಿ ಪೌರರಕ್ಷಣಾ ಸೆಕ್ಟರ್ ವಾರ್ಡನ್‌ಗಳನ್ನಾಗಿ ಅನುಮೋದನೆ ಪಡೆದ 49 ಅಭ್ಯರ್ಥಿಗಳಿಗೆ ಪೌರರಕ್ಷಣಾ ಜಾಕೇಟ್‌ಗಳನ್ನು ವಿತರಿಸುವುದರ ಮೂಲಕ ಪೌರರಕ್ಷಣೆಗೆ ಮತ್ತು ಜಿಲ್ಲಾ ಕಚೇರಿಯ ಮೈದಾನ ಹಾಗೂ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಸಸಿ ನೆಡುವುದರ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗೃಹರಕ್ಷಕದಳದ ಜಿಲ್ಲಾ ಕಮಾಂಡೆಟ್ ಚನ್ನಪ್ಪ ಎಸ್. ಅಥಣಿ, ಉಪ ಕಮಾಂಡೆಟ್ ಬಾಬಾಸಾಹೇಬ ಎಸ್. ಕಾಂಬಳೆ, ಬೋಧಕರಾದ ರವೀಂದ್ರ ಮಾಳಗಿ, ಆನಂದ ಜಿ. ನಾವಲಗಿ, ಲಕ್ಷ್ಮೀ ಜಂಗನವರ, ಭಾಗ್ಯಶ್ರೀ ರುಮೋಜಿ, ಬಸವರಾಜ ಹಗೇದಾಳ, ಎಂ.ಕೆ. ನಡುಗೇರಿ, ಅಧಿಕಾರಿಗಳು, ಘಟಕಾಧಿಕಾರಿಗಳು ಮತ್ತು ಗೃಹರಕ್ಷಕರು ಹಾಜರಿದ್ದರು.

Edited By :
Kshetra Samachara

Kshetra Samachara

31/03/2026 10:23 pm

Cinque Terre

5.12 K

Cinque Terre

0

ಸಂಬಂಧಿತ ಸುದ್ದಿ