ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಎಲ್‌ಪಿಜಿ ಗ್ಯಾಸ್ ಕೊರತೆ - ಆಟೋ ಚಾಲಕರು ಕಂಗಾಲು

ಬೆಳಗಾವಿ: ಬೆಳಗಾವಿ ನಗರದಲ್ಲಿ ಆಟೋ ಗ್ಯಾಸ್ ಕೊರತೆ ಉಂಟಾಗಿದ್ದು, ಗ್ಯಾಸ್ ಪಂಪ್‌ನಲ್ಲಿ ಆಟೋ ಚಾಲಕರು ಕಿಲೋಮೀಟರ್ ಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವಂತೆ ಆಗಿದೆ.

ಬೆಳಗಾವಿ ನಗರದಲ್ಲಿ ಇರುವ ಎಲ್ಲಾ ಆಟೋ ಗ್ಯಾಸ್ ಪಂಪ್‌ಗಳಲ್ಲಿ ಗ್ಯಾಸ್ ಖಾಲಿ ಆಗಿದೆ. ಆರ್‌ಟಿಓ ಸರ್ಕಲ್ ಬಳಿ ಇರುವ ಒಂದೇ ಪಂಪ್‌ನಲ್ಲಿ ಗ್ಯಾಸ್ ಬಾಕಿ ಇದೆ. ಹಾಗಾಗಿ ಪಂಪ್ ಮುಂದೆ ನೂರಾರು ಆಟೋಗಳ ಕ್ಯೂ ನಿಂತಿವೆ.‌ ಈಗಾಗಲೇ ಕಮರ್ಷಿಯಲ್ ಗ್ಯಾಸ್ ಕೊರತೆ ಉಂಟಾಗಿದ್ದು, ಇದರ ಮಧ್ಯೆ ಗ್ಯಾಸ್ ಬೆಲೆ ಏರಿಕೆಯಿಂದ ಆಟೋ ಚಾಲಕರಿಗೆ ಡಬಲ್ ಶಾಕ್ ಎದುರಾಗಿದೆ.

ಕಳೆದ ಎರಡು ದಿನಗಳಿಂದ ಆಟೋಗಳಿಗೂ ಗ್ಯಾಸ್ ಕೊರತೆ ಆಗುತ್ತಿದೆ. ಚಾಲಕರು

ಎರಡು ಮೂರು ಗಂಟೆ ಕ್ಯೂ ಹಚ್ಚಿ ಗ್ಯಾಸ್ ತುಂಬಿಸಿಕೊಳ್ಳಬೇಕಿದೆ. ಜೊತೆಗೆ

ಯುದ್ಧದಿಂದಾಗಿ ಮುಂಚೆ 50 ರೂಪಾಯಿ ಕೊಡ್ತಿದ್ದ ಆಟೋ ಚಾಲಕರು ಈಗ ಕೆಜಿಗೆ 80 ಪಾವತಿಸಬೇಕಾಗಿದೆ.

ಸದ್ಯ ದರ ಏರಿಕೆ, ಗ್ಯಾಸ್ ಕೊರತೆಯಿಂದ ಆಟೋ ಚಾಲಕರು ಕಂಗಾಲಾಗಿದ್ದು, ಏಕಾಏಕಿ ಗ್ಯಾಸ್ ದರ ಏರಿಕೆಯಿಂದ ಜೀವನ ನಡೆಸೋದು ಹೇಗೆ? ಅಂತ ಆಕ್ರೋಶ ಹೊರಹಾಕಿದ್ದಾರೆ.‌ ಈ ಸಮಸ್ಯೆಗೆ ಸರ್ಕಾರ ಕೂಡಲೇ ಪರಿಹಾರ ಕಂಡುಕೊಳ್ಳಬೇಕು ಎಂದು ಚಾಲಕರು ಒತ್ತಾಯಿಸಿದ್ದಾರೆ.

Edited By :
PublicNext

PublicNext

01/04/2026 01:48 pm

Cinque Terre

9.02 K

Cinque Terre

0

ಸಂಬಂಧಿತ ಸುದ್ದಿ