ಖಾನಾಪುರ: ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಡೋಂಗರಗಾವನಲ್ಲಿ ಗುರುವಾರ 31ರಂದು ರವಳನಾಥ ದೇವರ ವಾರ್ಷಿಕೋತ್ಸವದ ನಿಮಿತ್ತ ನಾಟಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಭೆಯ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸದಾನಂದ ಗ್ರಾಮ ಅಭಿವೃದ್ಧಿ ಕುರಿತು ಮಾತನಾಡಿದರು. ಹಾಗೆಯೇ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಅಶೋಕ್ ದೇಸಾಯಿ ಗ್ರಾಮಗಳ ಪ್ರಸ್ತಾವಿತ ಸ್ಥಳಾಂತರ ಹಾಗೂ ಅದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ವೇಳೆ ಕೃಷ್ಣ ಗುರುವ ಅವರು ತಮ್ಮ ಭಾಷಣದಲ್ಲಿ ಸ್ಥಳಾಂತರಗೊಳ್ಳುವ ಪ್ರತೀ ಕುಟುಂಬಕ್ಕೆ 15 ಲಕ್ಷ ರೂಪಾಯಿ ನೀಡಿ ಬೇರೆ ಬೇರೆ ಕಡೆ ಸ್ಥಳಾಂತರ ಮಾಡುವ ಬದಲು, ಒಂದೇ ಸ್ಥಳದಲ್ಲಿ ಪುನರ್ವಸತಿ ಮಾಡಬೇಕು, ಆಗ ಗ್ರಾಮ ಒಂದಾಗಿ ಉಳಿಯುತ್ತದೆ ಎಂದು ಬೇಡಿಕೆ ಮುಂದಿಡುತ್ತಿದ್ದಂತೆ ಶಾಸಕರು ಮಧ್ಯಪ್ರವೇಶ ಮಾಡಿ, “ಕೃಷ್ಣ ಗುರುವರ ಮಾತನ್ನು ಯಾರೂ ಕೇಳಬೇಡಿ, ಇಲ್ಲದಿದ್ದರೆ ನಿಮ್ಮ ಭಾಗದ ಅಭಿವೃದ್ಧಿ ಆಗುವುದಿಲ್ಲ,” ಎಂದು ಹೇಳಿದ್ದಾರೆ ಎಂಬ ಆರೋಪವನ್ನು ಗುರುವ ಮಾಡಿದ್ದಾರೆ.
ತಾವು ಬಳಸಿದ ಈ ಭಾಷೆ ಯೋಗ್ಯವಲ್ಲ ಎಂದು ಪ್ರಶ್ನಿಸಿದಾಗ, ‘ಇನ್ನೊಬ್ಬ ಶಾಸಕರಿಗೆ ಹೀಗೆ ಹೇಳಿದ್ದರೆ ಅಲ್ಲೇ ನಿನ್ನ ತಲೆ ಒಡೆದಿರುತ್ತಿದ್ದೆ,’ ಎಂಬ ಗೂಂಡಾಗಿರಿ ಭಾಷೆ ಬಳಕೆ ಮಾಡಿದರು.” ಅಲ್ಲದೇ ಆರು ತಿಂಗಳ ಹಿಂದೆ ಶಾಸಕರ ಪಿಎ ಅವರು ಶಿರೋಲಿ ಗ್ರಾಮ ಪಂಚಾಯಿತಿಗೆ ಹದಿನೈದನೇ ಹಣಕಾಸಿನ ಅನುದಾನ ಮಂಜೂರಾತಿಗೆ 25 ಲಕ್ಷ ರೂಪಾಯಿ ನಿಧಿಗೆ 25% ಕಮಿಷನ್ ಕೇಳಿದ್ದನ್ನು ನೆನಪಿಸಿದರು.
ನಾಗೇಶ್ ನಾಯ್ಕರ್, ಪಬ್ಲಿಕ್ ನೆಕ್ಸ್ಟ್, ಖಾನಾಪುರ
PublicNext
03/04/2026 03:03 pm
LOADING...