ಹಾವೇರಿಯಲ್ಲಿ ಇದೀಗ ಆಟೋ ಎಲ್‌ಪಿಜಿ ಪೂರೈಕೆಯಲ್ಲಿ ಸಹ ಕೊರತೆ ಕಾಣಲಾರಂಭಿಸಿದೆ. ಹಾವೇರಿ ನಗರದ ನೂರಾರು ಆಟೋಗಳಿಗೆ ಎಲ್‌ಪಿಜಿ ತುಂಬುತ್ತಿದ್ದ ಗೋ ಗ್ಯಾಸ್ ಬಂಕ್ ಗುರುವಾರ ಖಾಲಿಯಾಗಿದೆ.
ಪರಿಣಾಮ ಬಂಕ್ ಸಿಬ್ಬಂದಿ ನೋ ಸ್ಟಾಕ್ ಬೋರ್ಡ್ ಹಾಕಿದ್ದಾರೆ. ಮುಂಜಾನೆ 11 ಗಂಟೆಯವರೆಗೆ ಎಲ್‌ಪಿಜಿ ಪೂರೈಸಿದ ಬಂಕ್ ಮ್ಯಾನೇಜರ್ ಗಂಗಾಧರ ಗ್ಯಾಸ್ ಖಾಲಿಯಾಗುತ್ತಿದ್ದಂತೆ ಬಂಕ್ ಬಂದ್ ಮಾಡಿದ್ದಾರೆ.
ನನ್ನ ಮೇಲಾಧಿಕಾರಿಗಳು ಗ್ಯಾಸ್ ಮುಗಿಯುವತನಕ ಖಾಲಿ ಮಾಡು ಅಂತಾ ತಿಳಿಸಿದ್ದರು. ಅದರಂತೆ ಗ್ಯಾಸ್ ಖಾಲಿಯಾಗುವವರೆಗೆ ಪೂರೈಸಿ ಬಂಕ್ ಬಂದ್ ಮಾಡಿದ್ದೇನೆ ಎನ್ನುತ್ತಾರೆ ಗಂಗಾಧರ. ಇನ್ನೂ ನಮ್ಮ ಜೀವನ ನಿಂತಿರುವುದೇ ಆಟೋಗಳ ಮೇಲೆ ಈ ರೀತಿಯಾದರೆ ಹೇಗೆ ಜೀವನ ಮಾಡಬೇಕು ಎನ್ನುವುದು ಆಟೋ ಚಾಲಕರು ಬೇಸರ ವ್ಯಕ್ತಪಡಿಸಿದ್ದಾರೆ.
PublicNext
02/04/2026 09:11 pm
LOADING...