ಶಿವಮೊಗ್ಗ : ಭದ್ರಾವತಿ ತಾಲೂಕಿನ ಜೋಳದಹಾಳ್ ಸಮೀಪದ ದ್ಯಾಮಣ್ಣಕೆರೆ ಬಳಿ ಬೈಕ್ ಸವಾರ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ. ದಾಸರಕಲ್ಲಹಳ್ಳಿಯ ಮಧು (28) ಮೃತ ದುರ್ದೈವಿ. ಮಧು ಸ್ನೇಹಿತರೊಂದಿಗೆ ಅಮ್ಮನಗುಡ್ಡ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಊಟ ಮಾಡಿಕೊಂಡು ವಾಪಸಾಗುವಾಗ ಕೆರೆ ಬಳಿ ಅಪಘಾತ ಸಂಭವಿಸಿದೆ. ಒಂದೇ ಬೈಕ್‌ನಲ್ಲಿ ಮೂವರು ಸ್ನೇಹಿತರು ಪ್ರಯಾಣಿಸುತ್ತಿದ್ದರು. ಇನ್ನಿಬ್ಬರು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
03/04/2026 11:53 am
LOADING...