ಪುತ್ತೂರು: ಮಂಗಳೂರು ಚಾಲಿ ಅಡಿಕೆ. ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ ರೂ.500ಕ್ಕೆ ಖರೀದಿಯಾಗಿದೆ. ಫಸಲು ನಷ್ಟದಿಂದ ಸಂಕಷ್ಟಕ್ಕೆ ಈಡಾಗಿರುವ ಅಡಿಕೆ ಬೆಳೆಗಾರರಿಗೆ ಅಡಿಕೆ ಬೆಲೆ ಸ್ಥಿರತೆಯನ್ನು ಕಾಪಾಡಿಕೊಂಡಿರುವುದು ಮತ್ತು ಬೆಲೆ ಏರಿಕೆಯೊಂದಿಗೆ ಈ ವಾರದಲ್ಲಿ ರೂ.500 ದಾಟುವ ಸಾಧ್ಯತೆ ಕುರಿತು ಅಂದಾಜಿಸಲಾಗಿತ್ತು.
ಕೆಲವು ದಿನಗಳ ಹಿಂದೆ ಒಂದಷ್ಟು ಇಳಿಕೆ ಕಂಡಿದ್ದ ದರ ಮತ್ತೆ ಏರಿಕೆಯತ್ತ ಮುಖ ಮಾಡಿತ್ತು. ಹಾಲಿ ಪ್ರತಿಷ್ಟಿತ ಸಹಕಾರ ಸಂಸ್ಥೆ ಕ್ಯಾಂಪೋದಲ್ಲಿ ಹೊಸ ៩ ៩.ដ. .460-490 ಹಾಗೂ ಚೋಲ್ ಅಡಿಕೆ ರೂ.530-555ಕ್ಕೆ ತಲುಪಿದೆ. ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ರೂ.500 ಹಾಗೂ ಹಳೆ ಅಡಿಕೆ ರೂ.560 “ಮೀರಿ ಖರೀದಿಯಾಗಿದೆ. ರೋಗಗಳು ಹಾಗೂ ಇತರ ಕಾರಣಗಳಿಗಾಗಿ ಫಸಲು ನಷ್ಟ ಉಂಟಾಗಿರುವುದರಿಂದ ಮಾರುಕಟ್ಟೆಯಲ್ಲಿ ಅಡಿಕೆಗೆ ಬೇಡಿಕೆ ಇದೆ. ಮುಂದಿನ ದಿನಗಳಲ್ಲಿ ಅಡಿಕೆಗೆ ಇನ್ನಷ್ಟು ಬೆಲೆ ಏರುವ ಸಾಧ್ಯತೆ ಇದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು
PublicNext
03/04/2026 09:35 pm
LOADING...