ನೆಲಮಂಗಲ: ಆಟೋ LPG ಗ್ಯಾಸ್ ಗಾಗಿ ಭಾರೀ ಅವ್ಯವಸ್ಥೆ ಉಂಟಾಗಿದೆ. ಹೆಸರಘಟ್ಟ ರಸ್ತೆಯ ತ್ರಿವೇಣಿ ಪೆಟ್ರೋಲ್ ಬಂಕ್ ಮುಂದೆ ಕಿಲೋಮೀಟರ್‌ಗಳಷ್ಟು ಉದ್ದವಾದ ಸಾಲಿನಲ್ಲಿ ಆಟೋಗಳು ನಿಂತಿರುವ ದೃಶ್ಯ ಕಂಡುಬಂದಿದೆ.
ಬಂಕ್‌ನಲ್ಲಿ ಇದ್ದ ಸುಮಾರು 6 ಸಾವಿರ ಕೆಜಿ ಆಟೋ LPG ಸ್ಟಾಕ್ ಸಂಪೂರ್ಣ ಖಾಲಿಯಾಗಿದ್ದು, ಗ್ಯಾಸ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಚಾಲಕರು ಗಂಟೆಗಳ ಕಾಲ ಕಾದಿದ್ದರು. ಆದರೆ ಕೊನೆಗೆ ಗ್ಯಾಸ್ ಸಿಗದೆ ನಿರಾಸೆಗೊಳಗಾದ್ರು.
ಈ ಹಿನ್ನೆಲೆಯಲ್ಲಿ ಸಹನೆ ಕಳೆದು ಕೊಂಡ ಆಟೋ ಚಾಲಕರು ಪ್ರತಿಭಟನೆಗೆ ಮುಂದಾಗಿ, ಹೆಸರಘಟ್ಟ ರಸ್ತೆಯಲ್ಲಿ ವಾಹನಗಳನ್ನು ತಡೆದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಪರಿಣಾಮವಾಗಿ ಹೆಸರಘಟ್ಟ ರಸ್ತೆಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ, ಕೆಲಕಾಲ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು.
PublicNext
03/04/2026 10:34 pm
LOADING...