ಮಂಗಳೂರು: ಸೀ ಬ್ರೀಝ್ ಮ್ಯಾರಥಾನ್ ಹೆಸರಿನಲ್ಲಿ ವಂಚನೆ ಮಾಡಲಾಗುತ್ತಿದೆ. ಯಾರೂ ರಿಜಿಸ್ಟ್ರೇಷನ್ ಮಾಡದಿರಿ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಎಸ್‌ಬಿಐ ಬ್ಯಾಂಕ್ ಸ್ಪಾನ್ಸರ್ ಮಾಡುತ್ತಿರುವ ಸೀ ಬ್ರೀಝ್ ಮ್ಯಾರಥಾನ್ ನಗರದ ಮಂಗಳಾ ಸ್ಟೇಡಿಯಂನಲ್ಲಿ ಎ.19ರಂದು ಬೆಳಗ್ಗೆ 5.30ಕ್ಕೆ ನಡೆಯಲಿದೆ. ಈಗಲೇ ರಿಜಿಸ್ಟ್ರೇಷನ್ ಮಾಡಿ ಎಂದು ಮೊಬೈಲ್ ನಂಬರ್ ನೀಡಲಾಗಿದೆ. ವಿವಿಧ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, ಲಕ್ಷ ಮೊತ್ತದ ಕ್ಯಾಶ್ ಪ್ರೈಝ್ ಇದೆ. 5 ಕಿ.ಮೀ.ಗೆ 2.51 ಲಕ್ಷ ರೂ., 10 ಕಿ.ಮೀ., 3.51ಲಕ್ಷ ರೂ., 21ಕಿ.ಮೀ.ಗೆ 5ಲಕ್ಷ ರೂ ಕ್ಯಾಶ್ ಪ್ರೈಝ್ ಇದೆ ಆಮಿಷ ಒಡ್ಡಲಾಗಿದೆ.
ಆದರೆ ರಿಜಿಸ್ಟ್ರೇಷನ್ ಮಾಡಲು ಕಳಿಸಿರುವ ಲಿಂಕ್ ತೆರೆದಲ್ಲಿ ಮೊಬೈಲ್ ಹ್ಯಾಕ್ ಆಗುವ ಸಾಧ್ಯತೆಯಿದೆ. ಬ್ಯಾಂಕ್ ಖಾತೆಯಿಂದ ಹಣ ಎಗರಿಸುವ ಭೀತಿಯಿದೆ. ಆದ್ದರಿಂದ ಇದೊಂದು ಫೇಕ್ ಮ್ಯಾರಥಾನ್. ನಂಬಿ ಯಾರೂ ಮೋಸಹೋಗದಿರಿ. ರಿಜಿಸ್ಟ್ರೇಷನ್ ಮಾಡದಿರಿ ಎಂದು ಪೊಲೀಸ್ ಕಮಿಷನರ್ ಎಚ್ಚರಿಕೆ ನೀಡಿದ್ದಾರೆ.
PublicNext
04/04/2026 11:53 am
LOADING...