ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಬಿಜೆಪಿ ನಾಯಕರ ಆರೋಪಗಳಿಗೆ ಸಚಿವ ಸಂತೋಷ್ ಲಾಡ್ ತಿರುಗೇಟು

ದಾವಣಗೆರೆ: ಉಪಚುನಾವಣೆಯ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸಂತೋಷ್ ಲಾಡ್, ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಷ್ಯಾದಿಂದ ತೈಲ ಖರೀದಿ ಮತ್ತು ದೇಶದ ಅನಿಲ ಸಂಗ್ರಹ ಸಾಮರ್ಥ್ಯದ ಕೊರತೆಯ ಬಗ್ಗೆ ಪ್ರಶ್ನಿಸಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

"ಕಳೆದ ಐದು ವರ್ಷಗಳಿಂದ ಭಾರತವು ರಷ್ಯಾದಿಂದ ತೈಲವನ್ನು ಖರೀದಿಸುತ್ತಿದೆ. ಭಾರತ ಸರ್ಕಾರ ಶೇಕಡ ೪೫ರಷ್ಟು ತೈಲವನ್ನು ಖರೀದಿಸಿದ್ದರೆ, ರಿಲಯನ್ಸ್ ಕಂಪನಿಯು ಶೇಕಡ ೬೫ರಷ್ಟು ತೈಲವನ್ನು ಖರೀದಿಸಿದೆ. ಇದು ನಮ್ಮ ಜನರ ಹಣ, ಅದಾನಿ ಅಂಬಾನಿಯವರ ಹಣವಲ್ಲ. ಪುಕ್ಕಟೆ ಅಥವಾ ಕಡಿಮೆ ದರದಲ್ಲಿ ತೈಲ ಪಡೆದು ಅವರಿಗೆ ಲಾಭ ಮಾಡಿಕೊಡಲಾಗಿದೆ. ಇದರ ಬಗ್ಗೆ ಬಿಜೆಪಿ ನಾಯಕರು ದಯವಿಟ್ಟು ಮಾತನಾಡಬೇಕು. ನಿಮಗೆ ನಾಚಿಕೆ ಮಾನ ಮರ್ಯಾದೆ ಇದ್ದರೆ, ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು" ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ಸಿಲಿಂಡರ್ ಅಭಾವದ ಬಗ್ಗೆ ಪ್ರಸ್ತಾಪಿಸಿದ ಸಚಿವ ಲಾಡ್, "ಅನಿಲ ಪೂರೈಕೆ ಯಾಕೆ ಕಡಿಮೆಯಾಗಿದೆ? ಚೀನಾ ಒಂದು ವರ್ಷದವರೆಗೆ ಅನಿಲ ಸಂಗ್ರಹಿಸುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿಕೊಂಡಿದೆ. ಜಪಾನ್ ೨೫೬ ದಿನಗಳ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಆದರೆ ನಮ್ಮಲ್ಲಿ ಕೇವಲ ಹತ್ತು ದಿನಗಳಿಗೆ ಆಗುವಷ್ಟು ಮಾತ್ರ ಸಂಗ್ರಹ ಸಾಮರ್ಥ್ಯವಿದೆ. ಕಳೆದ ೧೨ ವರ್ಷಗಳಲ್ಲಿ ಪ್ರಧಾನಿ ಮೋದಿ ಭಾಷಣ ಮಾಡುತ್ತಾ 'ವಿಶ್ವಗುರು' ಎಂದು ಹೇಳಿಕೊಂಡು ಬಂದರು, ಆದರೆ ಈ ವಾಸ್ತವವನ್ನು ನೋಡಿ" ಎಂದು ಟೀಕಿಸಿದರು.

ಕೇಂದ್ರ ಸರ್ಕಾರದ ಚರ್ಚೆಗಳು ಕೇವಲ ಹಿಂದೂಸ್ತಾನ, ಪಾಕಿಸ್ತಾನ, ಮುಸಲ್ಮಾನ, ಬಾಂಗ್ಲಾದೇಶದ ಸುತ್ತಲೇ ಇವೆ ಹೊರತು, ಬೇರೇನೂ ಉಳಿದಿಲ್ಲ ಎಂದು ಲಾಡ್ ಆರೋಪಿಸಿದರು. "ಪಾಪ ಅತಿಯಾದಾಗ, ಜನ ಕೃಷ್ಣನ ರೂಪದಲ್ಲಿ ಬಂದು ತಕ್ಕ ಪಾಠ ಕಲಿಸುತ್ತಾರೆ" ಎಂದು ಸಚಿವ ಸಂತೋಷ್ ಲಾಡ್ ಬಿಜೆಪಿ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ, ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

Edited By :
PublicNext

PublicNext

04/04/2026 06:38 pm

Cinque Terre

5.65 K

Cinque Terre

2

ಸಂಬಂಧಿತ ಸುದ್ದಿ