ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

RCB vs CSK : IPL ಟಿಕೆಟ್‌ಗಾಗಿ ಸ್ಪೀಕರ್ ಕಚೇರಿ ಮುಂದೆ ಸಾಲು ಸಾಲಾಗಿ ನಿಂತ ಶಾಸಕರ ಪಿಎಗಳು.!

ಬೆಂಗಳೂರು: ರಾಜ್ಯದಲ್ಲಿ ಇಂಧನ ಕೊರತೆಯಿಂದ ಆಟೋ ಚಾಲಕರು ರಾತ್ರಿಯಿಡೀ ಗ್ಯಾಸ್‌ಗಾಗಿ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಆದರೆ, ಮತ್ತೊಂದೆಡೆ, ನಮ್ಮ ಜನಪ್ರತಿನಿಧಿಗಳಿಗೆ ಇದ್ಯಾವುದೂ ಕಾಣುತ್ತಿಲ್ಲ. ಅವರು ಮಾತ್ರ ಮೋಜು-ಮಸ್ತಿಯ ಲೋಕದಲ್ಲಿ ಹಾಯಾಗಿದ್ದಾರೆ. ಐಪಿಎಲ್ ಟಿಕೆಟ್‌ಗಳನ್ನು ಪಡೆಯಲು ಶಾಸಕರು ತಮ್ಮ ಪಿಎಗಳನ್ನು ಸಾಲಿನಲ್ಲಿ ನಿಲ್ಲಿಸಿರುವುದು ಬೆಳಕಿಗೆ ಬಂದಿದೆ.

ಶಾಸಕರಿಗೆ ಉಚಿತ ಟಿಕೆಟ್ ವ್ಯವಸ್ಥೆ

ಸರ್ಕಾರ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ನಡುವಿನ ಒಪ್ಪಂದದ ಪ್ರಕಾರ, ಪ್ರತಿ ಐಪಿಎಲ್ ಪಂದ್ಯಕ್ಕೆ ಶಾಸಕರಿಗೆ ಮೂರು ಉಚಿತ ಟಿಕೆಟ್‌ಗಳು ಲಭ್ಯವಿವೆ. ನಾಳೆ ಬೆಂಗಳೂರು ಮತ್ತು ಚೆನ್ನೈ (RCB vs CSK) ನಡುವೆ ನಡೆಯಲಿರುವ ಬಹುನಿರೀಕ್ಷಿತ ಪಂದ್ಯದ ಟಿಕೆಟ್‌ಗಳನ್ನು ಪಡೆಯಲು ಶಾಸಕರ ಪಿಎಗಳು ಸ್ಪೀಕರ್ ಕಚೇರಿ ಮುಂದೆ ಸಾಲುಗಟ್ಟಿ ನಿಂತಿದ್ದರು.

ವಿಪರ್ಯಾಸದ ವರ್ತನೆ

ಸ್ಪೀಕರ್ ಕಚೇರಿಯಿಂದ ಈ ಟಿಕೆಟ್‌ಗಳನ್ನು ವಿತರಿಸಲಾಗಿದ್ದು, ಶಾಸಕರ ಸೂಚನೆಯಂತೆ ಅವರ ಪಿಎಗಳು ಟಿಕೆಟ್ ಪಡೆದಿದ್ದಾರೆ. ಜನರ ಅಹವಾಲುಗಳಿಗೆ ಕಿವಿಗೊಡದ ಜನಪ್ರತಿನಿಧಿಗಳು, ಐಪಿಎಲ್ ಟಿಕೆಟ್‌ಗಾಗಿ ಇಂತಹ ಉತ್ಸಾಹ ತೋರುವುದು ನಿಜಕ್ಕೂ ವಿಪರ್ಯಾಸವೇ ಸರಿ.

Edited By : Vijay Kumar
PublicNext

PublicNext

04/04/2026 04:13 pm

Cinque Terre

12.56 K

Cinque Terre

5

ಸಂಬಂಧಿತ ಸುದ್ದಿ