ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2026 | ಸೂರ್ಯಕುಮಾರ್‌ ಫಿಫ್ಟಿ - ಡೆಲ್ಲಿಗೆ 163 ರನ್‌ಗಳ ಗುರಿ ನೀಡಿದ ಮುಂಬೈ

ನವದೆಹಲಿ: ನಾಯಕ ಸೂರ್ಯಕುಮಾರ್‌ ಯಾದವ್ ಅರ್ಧಶತಕ, ರೋಹಿತ್‌ ಶರ್ಮಾ ಸಮಯೋಚಿತ ಬ್ಯಾಟಿಂಗ್ ಸಹಾಯದಿಂದ ಮುಂಬೈ ಇಂಡಿಯನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್‌ಗೆ 163 ರನ್‌ಗಳ ಗುರಿ ನೀಡಿದೆ.

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಇಂದು ನಡೆಯುತ್ತಿರುವ ಐಪಿಎಲ್ 2026ರ 8ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 6 ವಿಕೆಟ್‌ ನಷ್ಟಕ್ಕೆ 162 ರನ್‌ ಬಾರಿಸಿದೆ. ತಂಡದ ಪರ ಸೂರ್ಯಕುಮಾರ್‌ ಯಾದವ್ 51 ರನ್‌ (36 ಎಸೆತ), ರೋಹಿತ್‌ ಶರ್ಮಾ 35 ರನ್‌ (26 ಎಸೆತ) ಹಾಗೂ ನಮನ್ ಧೀರ್ 28 ರನ್‌ (21 ಎಸೆತ) ಗಳಿಸಿದರು.

ಇನ್ನು ಡೆಲ್ಲಿ ಪರ ಮುಖೇಶ್ ಕುಮಾರ್‌ 2 ವಿಕೆಟ್‌ ಉರುಳಿಸಿದರೆ, ಲುಂಗಿ ಎನ್ಗಿಡಿ, ನಾಯಕ ಅಕ್ಷರ್ ಪಟೇಲ್, ವಿಪ್ರಜ್ ನಿಗಮ್ ಹಾಗೂ ಟಿ ನಟರಾಜನ್ ತಲಾ 1 ವಿಕೆಟ್‌ ಕಿತ್ತು ತಂಡಕ್ಕೆ ಆಸರೆಯಾದರು.

Edited By : Vijay Kumar
PublicNext

PublicNext

04/04/2026 05:24 pm

Cinque Terre

3.14 K

Cinque Terre

0

ಸಂಬಂಧಿತ ಸುದ್ದಿ