ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2026 | ರಿಜ್ವಿ ಶತಕ ಜಸ್ಟ್‌ ಮಿಸ್‌ - ಮುಂಬೈ ವಿರುದ್ಧ 6 ವಿಕೆಟ್‌ಗಳಿಂದ ಗೆದ್ದ ಡೆಲ್ಲಿ

ನವದೆಹಲಿ: ಸಮೀರ್ ರಿಜ್ವಿ ಜವಾಬ್ದಾರಿಯುತ ಅರ್ಧಶತಕ, ಪಾತುಮ್ ನಿಸ್ಸಂಕ ಅಬ್ಬರದ ಸಹಾಯದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 6 ವಿಕೆಟ್‌ಗಳಿಂದ ಗೆದ್ದು ಬೀಗಿದೆ.

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಇಂದು ನಡೆದ ಐಪಿಎಲ್ 2026ರ 8ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ 6 ವಿಕೆಟ್‌ ನಷ್ಟಕ್ಕೆ 162 ರನ್‌ ಬಾರಿಸಿತ್ತು. ಇದಕ್ಕೆ ಉತ್ತರವಾಗಿ ಡೆಲ್ಲಿ ತಂಡವು 18.1 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 164 ರನ್‌ ಗಳಿಸಿ ಜಯಭೇರಿ ಬಾರಿಸಿದೆ. ತಂಡದ ಪರ ಸಮೀರ್ ರಿಜ್ವಿ 90 ರನ್‌ (51 ಎಸೆತ), ಪಾತುಮ್ ನಿಸ್ಸಂಕ 44 ರನ್‌ (30 ಎಸೆತ), ಡೆವಿಡ್ ಮಿಲ್ಲರ್‌ 21 ರನ್‌ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಇದಕ್ಕೂ ಮುನ್ನ ಡೆಲ್ಲಿ ಪರ ಮುಖೇಶ್ ಕುಮಾರ್‌ 2 ವಿಕೆಟ್‌ ಉರುಳಿಸಿದರೆ, ಲುಂಗಿ ಎನ್ಗಿಡಿ, ನಾಯಕ ಅಕ್ಷರ್ ಪಟೇಲ್, ವಿಪ್ರಜ್ ನಿಗಮ್ ಹಾಗೂ ಟಿ ನಟರಾಜನ್ ತಲಾ 1 ವಿಕೆಟ್‌ ಕಿತ್ತು ತಂಡಕ್ಕೆ ಆಸರೆಯಾಗಿದ್ದರು.

Edited By : Vijay Kumar
PublicNext

PublicNext

04/04/2026 07:05 pm

Cinque Terre

9.9 K

Cinque Terre

0