ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ಶುಕ್ರವಾರ ನಡೆದ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧದ ಪಂದ್ಯದಲ್ಲಿ 209 ರನ್ ಗಳಿಸುವ ಮೂಲಕ ಐಪಿಎಲ್‌ನಲ್ಲಿ ಅತಿ ಹೆಚ್ಚು, ಅಂದರೆ 36 ಬಾರಿ 200+ ಮೊತ್ತ ಗಳಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಹಿಂದಿಕ್ಕಿದ ಸಿಎಸ್‌ಕೆ, ನೂತನ ದಾಖಲೆ ಬರೆದಿದೆ.
ಆರ್‌ಸಿಬಿ 35 ಬಾರಿ 200+ ರನ್ ಗಳಿಸಿ ಎರಡನೇ ಸ್ಥಾನದಲ್ಲಿದೆ. ಇನ್ನು, ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ (ಎಂಐ) ತಂಡಗಳು ತಲಾ 32 ಬಾರಿ ಈ ಸಾಧನೆ ಮಾಡಿವೆ. ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) 30 ಬಾರಿ 200+ ಮೊತ್ತ ದಾಖಲಿಸಿ ಐದನೇ ಸ್ಥಾನದಲ್ಲಿದೆ.
PublicNext
04/04/2026 08:26 pm
LOADING...