ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಪಿಎಲ್: ಮೈದಾನದಲ್ಲಿ ಕಸ ಆಯ್ದು ಗಮನ ಸೆಳೆದ ಸ್ಟಾರ್ ಕ್ರಿಕೆಟಿಗ ಮ್ಯಾಥ್ಯೂ ಹೇಡನ್!

ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಸೀಸನ್ ಅಭಿಮಾನಿಗಳಿಗೆ ಒಂದಕ್ಕಿಂತ ಒಂದು ರೋಚಕ ಪಂದ್ಯಗಳನ್ನು ನೀಡುತ್ತಾ ಮನರಂಜಿಸುತ್ತಿದೆ. ಈ ಬಾರಿಯ ಐಪಿಎಲ್‌ನ ನಿಜವಾದ ಮೋಜು ಇದೀಗ ಆರಂಭವಾಗಿದ್ದು, ಇದರ ನಡುವೆ, ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಅವರ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆದಿದೆ.

ಹೌದು ಎರಡು ಬಾರಿ ವಿಶ್ವ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದ ಹಾಗೂ ಒಮ್ಮೆ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿದ ಶ್ರೇಷ್ಠ ಆಟಗಾರ ಮ್ಯಾಥ್ಯೂ ಹೇಡನ್, ಐಪಿಎಲ್ ಇತಿಹಾಸದಲ್ಲಿ 'ಮುಂಗುಸಿ ಬ್ಯಾಟ್' ಅನ್ನು ಪರಿಚಯಿಸಿ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನವಾಗಿದ್ದರು. ಐಪಿಎಲ್‌ನಿಂದ ನಿವೃತ್ತರಾಗಿದ್ದರೂ, ಈ ವರ್ಷ ಅವರು ಗುಜರಾತ್ ಟೈಟಾನ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾಣಿಸಿಕೊಂಡಿದ್ದಾರೆ. ಇದರ ನಡುವ ಅವರ ಮತ್ತೊಂದು ವಿಡಿಯೋದಿಂದ ಎಲ್ಲರ ಹೃದಯ ಗೆದ್ದಿದ್ದಾರೆ.

ಹೌದು ವೈರಲ್ ಆಗಿರುವ ವಿಡಿಯೋದಲ್ಲಿ, ಮ್ಯಾಥ್ಯೂ ಹೇಡನ್ ಕ್ರಿಕೆಟ್ ಮೈದಾನದಲ್ಲಿ ಬಿದ್ದಿರುವ ಖಾಲಿ ಬಾಟಲಿಗಳು ಮತ್ತು ಇತರ ಕಸವನ್ನು ಆಯ್ದು ಕಸದ ಬುಟ್ಟಿಗೆ ಹಾಕುತ್ತಿರುವುದು ಸೆರೆಯಾಗಿದೆ. ಮೈದಾನದಲ್ಲಿ ಬಿದ್ದ ಕಸವನ್ನು ಎತ್ತುವುದು ಅವರ ಕೆಲಸವಾಗಿಲ್ಲದಿದ್ದರೂ, ಸ್ವಚ್ಛತೆಯ ಬಗ್ಗೆ ಅವರ ಕಾಳಜಿ ಎಲ್ಲರ ಗಮನ ಸೆಳೆದಿದೆ.

ಒಬ್ಬ ಹಿರಿಯ ಕೋಚ್ ಆಗಿ, ಪಂದ್ಯದ ನಂತರ ಅವರು ಆರಾಮವಾಗಿ ಕುಳಿತುಕೊಳ್ಳಬಹುದಿತ್ತು. ಆದರೆ, ಅದರ ಬದಲಿಗೆ ಸ್ವಚ್ಛತೆ ಕಾಪಾಡಲು ಮುಂದಾದ ಅವರ ಈ ಕಾರ್ಯ ಭಾರತೀಯ ಅಭಿಮಾನಿಗಳ ಹೃದಯ ಗೆದ್ದಿದೆ. ಮೈದಾನದಲ್ಲಿ ಕಸ ಆಯ್ದು ಸ್ವಚ್ಛತೆಯ ಮಾದರಿ ಸಾರಿದ ದಿಗ್ಗಜ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಅವರ ಈ ನಡೆ ಎಲ್ಲೆಡೆಯಿಂದ ಪ್ರಶಂಸೆ ಗಳಿಸಿದೆ.

ಈ ವೀಡಿಯೊವನ್ನು ನೋಡಿದ ಅನೇಕ ಅಭಿಮಾನಿಗಳು, ಮ್ಯಾಥ್ಯೂ ಹೇಡನ್ ಅವರಂತಹ ಹಿರಿಯ ಆಟಗಾರರಿಂದ ಯುವ ಕ್ರಿಕೆಟಿಗರು ಮತ್ತು ಸಾರ್ವಜನಿಕರು ಕಲಿಯಬೇಕಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. "ವಿದೇಶಿ ಕೋಚ್ ಒಬ್ಬರು ಮೈದಾನದಲ್ಲಿ ಸ್ವಚ್ಛತೆಯನ್ನು ಹೇಗೆ ಕಾಪಾಡಿಕೊಳ್ಳಬೇಕೆಂದು ಭಾರತೀಯ ನಾಗರಿಕರಿಗೆ ಕಲಿಸಬೇಕಾದ ಸಂದರ್ಭ ಬಂದಿದೆ" ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 2010ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಟ್ರೋಫಿ ಎತ್ತಿದಾಗ ಮತ್ತು ಆಸ್ಟ್ರೇಲಿಯಾ ಎರಡು ಬಾರಿ ವಿಶ್ವಕಪ್ ಗೆದ್ದಾಗ ಹೇಡನ್ ತಂಡದ ಪ್ರಮುಖ ಭಾಗವಾಗಿದ್ದರು. ಅವರ ಇಂತಹ ಕಾರ್ಯಗಳು ಅವರ ವ್ಯಕ್ತಿತ್ವಕ್ಕೆ ಮತ್ತಷ್ಟು ಮೆರುಗು ನೀಡಿವೆ.

Edited By : Nirmala Aralikatti
PublicNext

PublicNext

04/04/2026 11:37 am

Cinque Terre

37.16 K

Cinque Terre

0

ಸಂಬಂಧಿತ ಸುದ್ದಿ