ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯ ಜಿಮ್‌ಗಳಲ್ಲಿ ಲವ್ ಜಿಹಾದ್ ಆರೋಪ - ಮತ್ತೋರ್ವ ಯುವಕನ ವಿರುದ್ಧ ಪ್ರಕರಣ ದಾಖಲು..!!

ಹುಬ್ಬಳ್ಳಿ : ನಗರದಲ್ಲಿನ ಜಿಮ್‌ಗಳನ್ನು ಕೇಂದ್ರವಾಗಿಸಿಕೊಂಡು ಲವ್ ಜಿಹಾದ್ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆ, ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಜಿಮ್ ಟ್ರೇನರ್ ಸಮೀರ್ ಮುಲ್ಲಾ ವಿರುದ್ಧದ ಆರೋಪಗಳ ನಡುವೆ, ಅದೇ ಜಿಮ್‌ಗೆ ಸಂಬಂಧಿಸಿದ ಮತ್ತೋರ್ವ ಯುವಕನ ವಿರುದ್ಧವೂ ದೂರು ದಾಖಲಾಗಿದೆ.

ಮಸಲ್ ಫ್ಯಾಕ್ಟರಿ ಜಿಮ್‌ನಲ್ಲಿ ಹಿಂದೂ ಯುವತಿಯರನ್ನು ಗುರಿಯಾಗಿಸಿ ಪ್ರೀತಿ ಹೆಸರಿನಲ್ಲಿ ಸಂಪರ್ಕ ಬೆಳೆಸಿ, ಬಳಿಕ ಲೈಂಗಿಕ ದೌರ್ಜನ್ಯ ಹಾಗೂ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಇದೇ ಜಿಮ್‌ಗೆ ಸಂಬಂಧಿಸಿದ ಮುಫೀಸ್ ಎಂಬಾತ, ಸಹಾನ ಎಂಬ ಯುವತಿಯನ್ನು ಪ್ರೀತಿಯ ನೆಪದಲ್ಲಿ ಸಂಪರ್ಕಿಸಿ ಬಳಿಕ ಬ್ಲ್ಯಾಕ್‌ಮೇಲ್ ಹಾಗೂ ದೌರ್ಜನ್ಯ ನಡೆಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಹಾನ ಕೇಶ್ವಾಪುರದ ಫತೀಮಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವೇಳೆ, ಕಾಲೇಜು ಕಾರ್ಯಕ್ರಮದ ಸಂದರ್ಭದಲ್ಲಿ ಮುಫೀಸ್ ಪರಿಚಯವಾಗಿದ್ದಾನೆ. ನಂತರ ಆ ಪರಿಚಯ ಪ್ರೀತಿಗೆ ತಿರುಗಿ ಮದುವೆಯ ಹಂತಕ್ಕೂ ತಲುಪಿತ್ತು. ಆದರೆ ವಿಷಯ ತಿಳಿದ ಯುವತಿಯ ಕುಟುಂಬಸ್ಥರು ಮದುವೆಗೆ ವಿರೋಧ ವ್ಯಕ್ತಪಡಿಸಿ, ಮುಫೀಸ್ ಕುರಿತು ಮನವರಿಕೆ ಮಾಡಿಕೊಟ್ಟಿದ್ದಾರೆ.

ಇದಾದ ಬಳಿಕವೂ ಆರೋಪಿ ಯುವತಿಗೆ ನಿರಂತರವಾಗಿ ಬ್ಲ್ಯಾಕ್‌ಮೇಲ್ ಮಾಡಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಕೊನೆಗೆ ಯುವತಿ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಮುಫೀಸ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಈ ನಡುವೆ, ನಗರದಲ್ಲಿನ ಕೆಲವು ಜಿಮ್‌ಗಳಲ್ಲಿ ಯುವತಿಯರನ್ನು ಗುರಿಯಾಗಿಸಿಕೊಂಡು ಇಂತಹ ಚಟುವಟಿಕೆಗಳು ನಡೆಯುತ್ತಿವೆಯೇ ಎಂಬ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡಿದ್ದಾರೆ.

ಸಂತೋಷ್ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

05/04/2026 10:49 am

Cinque Terre

34.73 K

Cinque Terre

6

ಸಂಬಂಧಿತ ಸುದ್ದಿ