ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಲವ್ ಜಿಹಾದ್, ಅತ್ಯಾಚಾರ ಪ್ರಕರಣ - ದೂರು, ಪ್ರತಿದೂರು ದಾಖಲು..!

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಆರೋಪ ಪ್ರಕರಣ ಈಗ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೇ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದ್ದು, ಪ್ರಕರಣದಲ್ಲಿ ದೂರು, ಪ್ರತಿದೂರುಗಳು ಜೋರಾಗಿದೆ.

ಸಮೀರ್ ಮುಲ್ಲಾ ಸಹೋದರಿ ಮತ್ತು ಕುಟುಂಬದವರ ವಿರುದ್ಧ ಸಂತ್ರಸ್ಥ ಯುವತಿ ತಾಯಿಯಿಂದ ದೂರು ನೀಡಿದ್ದು, ಹುಬ್ಬಳ್ಳಿಯ ವಿದ್ಯಾನಗರ ಠಾಣೆಯಲ್ಲಿ ಸಮೀರ್ ಮುಲ್ಲಾ ಸಹೋದರಿ ತೈಸಿನ್ ಸೇರಿ ಆರು ಜನರ ವಿರುದ್ಧ ದೂರು ನೀಡಿದ್ದಾರೆ. ಅಲ್ಲದೇ ತಮಗೆ ಜೀವ ಬೆದರಿಕೆ ಹಾಕಿದ್ದಾರೆ. ನಮ್ಮ ಮಗಳಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ನೂರು ಜನರಿಂದ ರೇಪ್ ಮಾಡಿಸ್ತೇವೆ, ಮನೆ ಸುಟ್ಟು ಹಾಕ್ತೇವೆ ಅಂತ ಬೆದರಿಸಿದ್ದಾರೆ ಅಂತ ದೂರಿನಲ್ಲಿ ತಿಳಿಸಿದ್ದಾರೆ.

ಇದಾದ ಬೆನ್ನಲ್ಲೇ ಜಿಮ್ ಟ್ರೈನರ್ ಸಮೀರ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸ್ವತ ಯುವತಿಯಿಂದ ಸಮೀರ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ವಿದ್ಯಾನಗರ ಠಾಣೆಗೆ ದೂರು ನೀಡಿರೋ ಯುವತಿ, ಬಿಎನ್ಎಸ್ 64(1), 351,123 ಸೆಕ್ಷನ್ ಅಡಿ ದೂರು ದಾಖಲಿಸಿದ್ದಾರೆ. ಜಿಮ್ ಗೆ ಹೋಗುವಾಗ ಸಮೀರ್ ಪರಿಚಯವಾಗಿದ್ದ. ಆಗಸ್ಟ್ 16-2025 ರಂದು ನನ್ನ ಮನೆಗೆ ಕರೆಸಿಕೊಂಡಿದ್ದ. ಜ್ಯೂಸ್ ನಲ್ಲಿ ಮತ್ತು ಬರೋ ಪದಾರ್ಥ ಹಾಕಿ ನನಗೆ ಕುಡಿಸಿದ್ದ. ನಂತರ ನನ್ನ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ್ದ. ಅದನ್ನು ವಿಡಿಯೋ ಮಾಡಿಟ್ಟುಕೊಂಡು ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇನ್ನೂ ಆರೋಪಿ ಸಮೀರ್ ಮುಲ್ಲಾನಿಂದ ಕೂಡ ಹುಬ್ಬಳ್ಳಿಯ ಅಶೋಕ ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ತನ್ನನ್ನು ಆರವತ್ತು ಜನರು ಬಂದು ಅಪಹರಣ ಮಾಡಿಕೊಂಡು ಹೋಗಿದ್ದರು. ನಂತರ ಮನಸೋ ಇಚ್ಚೆ ಥಳಿಸಿದ್ದಾರೆ ಅಂತ ದೂರು ಸಲ್ಲಿಸಿದ್ದಾರೆ. ಹೆಸರು ಉಲ್ಲೇಖಿಸದೇ ದೂರು ನೀಡಿರೋ ಸಮಿರ್ ಮುಲ್ಲಾ,‌ ದೂರಿನ ಹಿನ್ನೆಲೆಯಲ್ಲಿ ತನಿಖೆ ಮಾಡುತ್ತಿದ್ದಾರೆ.

ನಿನ್ನೆ ಮುಂಜಾನೆ ಸಮೀರ್ ಮನೆಗೆ ಹೋಗಿ ಸಮೀರ್ ನನ್ನು ಎತ್ತಾಕಿಕೊಂಡು ಬಂದಿದ್ದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಸಮೀರ್ ನನ್ನು ಥಳಿಸಿ ಪೊಲೀಸರಿಗೊಪ್ಪಿಸಿದ್ದರು. ಸಮೀರ್ ಲವ್ ಜಿಹಾದ್ ಮಾಡಿದ್ದಾನೆ ಅಂತ ಆರೋಪಿಸಿ ಥಳಿಸಿದ್ದಾರೆ. ಒಟ್ಟಿನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು, ಪ್ರತಿದೂರು ದಾಖಲಾಗಿವೆ.

Edited By : Abhishek Kamoji
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

04/04/2026 01:32 pm

Cinque Terre

28.92 K

Cinque Terre

1

ಸಂಬಂಧಿತ ಸುದ್ದಿ