ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕುಡಿಯುವ ನೀರು ಟ್ಯಾಂಕ್ ಬೇಕಾದ್ರೆ ಲಂಚ ಕೊಡಬೇಕು - ಬಯಲಾಯ್ತು L&T ಸಿಬ್ಬಂದಿ ಭ್ರಷ್ಟಾಚಾರ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮೊದಲೇ ಕುಡಿಯುವ ನೀರಿನ ಅಭಾವ ಹೆಚ್ಚಾಗಿದೆ. 20 ದಿನಗಳು ಕಳೆದ್ರೂ ಒಂದೊಂದು ಏರಿಯಾಗಳಿಗೆ ಸರಿಯಾದ ನೀರು ಪೂರೈಕೆ ಮಾಡುತ್ತಿಲ್ಲ. ನೀರಿನ ಟ್ಯಾಂಕರ್ ಮೂಲಕ L&T ವತಿಯಿಂದ ಕುಡಿಯುವ ನೀರು ಪೂರೈಸಬೇಕು. ಆದ್ರೆ ವಾಲ್‌ಮ್ಯಾನ್‌ಗಳು ಹಣ ಕೊಟ್ಟವರ ಮನೆಗೆ ಮಾತ್ರ ನೀರಿನ ಟ್ಯಾಂಕರ್ ಬಿಡುತ್ತಿದ್ದಾರೆಂದು ಹುಬ್ಬಳ್ಳಿಯ ಆನಂದ ನಗರ ಕೃಷ್ಣಗಿರಿ ಕಾಲೋನಿ ನಿವಾಸಿಗಳು ಆರೋಪ ಮಾಡುತ್ತಿದ್ದಾರೆ.

ಹೌದು,,, ಎಲ್ಲೆಲ್ಲಿ ಕುಡಿಯುವ ನೀರು ಬಿಡಲು ತಡವಾಗುತ್ತದೆಯೋ ಆ ಏರಿಯಾಗೆ L&T ಯಿಂದ ಕುಡಿಯುವ ನೀರಿನ ಟ್ಯಾಂಕರ್ ಪೂರೈಸಬೇಕು. ಆದ್ರೆ ವಾಲ್‌ ಮ್ಯಾನ್‌ಗಳು 800 ರೂ. ಹಣ ತೆಗೆದುಕೊಂಡು ಒಂದೊಂದು ಮನೆಗೆ ನೀರು ಬಿಡುತ್ತಿದ್ದಾನಂತೆ, ಅದು ಕೃಷ್ಣಗಿರಿ ಕಾಲೋನಿ ನಿವಾಸಿಗಳ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದ್ದಾನೆ.

ವಾಲ್ ಮ್ಯಾನ್ 800 ರೂ. ಹಣ ಫೋನ್ ಪೇ ಮಾಡಿಸಿಕೊಂಡಿದ್ದು ಕೂಡ ಸಿಕ್ಕಿದೆ. ಇಡೀ‌ ಕಾಲೋನಿಗೆ ಬಿಡಬೇಕಾದ ನೀರಿನ ಟ್ಯಾಂಕರ್‌ನ್ನು ಒಂದೇ ಮನೆಗೆ ಬಿಡುತ್ತಿದ್ದಾನೆ. ಇದಕ್ಕೆ ಸ್ಥಳೀಯರು ಗರಂ ಆಗಿದ್ದಾರೆ.

ಜನರ ದಾಹ ತೀರಿಸಬೇಕಾದ ವಾಲ್ ಮ್ಯಾನ್ ಲಂಚ ತೆಗೆದುಕೊಂಡು ಒಂದೊಂದು ಮನೆಗೆ ನೀರು ಬಿಡುತ್ತಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳು ತನಿಖೆ ಮಾಡಿ, ಲಂಚ ಪಡೆಯುತ್ತಿರುವ ವಾಲ್ ಮ್ಯಾನ್ ತೆಗೆದು ಹಾಕಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

05/04/2026 02:00 pm

Cinque Terre

34.38 K

Cinque Terre

6

ಸಂಬಂಧಿತ ಸುದ್ದಿ