ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಏಪ್ರಿಲ್ 6, 7ರಂದು ಆನ್‌ಲೈನ್ ಸೇವೆ ಬಂದ್!

ಹುಬ್ಬಳ್ಳಿ : ಗ್ರಾಮೀಣ ಪ್ರದೇಶದ Non-RAPDRP ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ತುರ್ತು ನಿರ್ವಹಣೆ ಕಾರ್ಯದ ನಿಮಿತ್ತ ಏ.6 ಹಾಗೂ 7 ರ ವರೆಗೆ ಎರಡು ದಿನಗಳ ವರೆಗೆ ಹೆಸ್ಕಾಂ ನ ಆನ್‌ಲೈನ್‌ ಸೇವೆಗಳು ತಾತ್ಕಾಲಿಕವಾಗಿ ಲಭ್ಯವಿರುವುದಿಲ್ಲ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳಾದ ಧಾರವಾಡ, ಉತ್ತರ ಕನ್ನಡ, ಬೆಳಗಾವಿ, ಹಾವೇರಿ, ಗದಗ , ವಿಜಯಪುರ ಹಾಗೂ ಬಾಗಲಕೋಟೆಯ ಗ್ರಾಮೀಣ ಪ್ರದೇಶಗಳಲ್ಲಿ ಮುಂದಿನ ಎರಡು ದಿನಗಳು ವರೆಗೆ (ಏ.6 ಹಾಗೂ 7 ) ಆನ್‌ಲೈನ್‌ ಸೇವೆಗಳು ಲಭ್ಯವಿರುವುದಿಲ್ಲ. ಗ್ರಾಹಕರು ಸಹಕರಿಸುವಂತೆ ಹೆಸ್ಕಾಂನ ಅಧೀಕ್ಷಕ ಇಂಜಿನಿಯರ್‌ (ಐಟಿ ಮತ್ತು ಎಂ.ಟಿ) ಪ್ರಕಟಣೆಯಲ್ಲಿ ತಿಳಿಸಿದೆ.

Edited By :
Kshetra Samachara

Kshetra Samachara

04/04/2026 09:40 pm

Cinque Terre

13.23 K

Cinque Terre

0

ಸಂಬಂಧಿತ ಸುದ್ದಿ