ಕುಂದಗೋಳ : ಧಾರವಾಡ ಜಿಲ್ಲಾಧಿಕಾರಿ ಸ್ನೇಹಲ್, ಆರ್ ಅವರು ಕುಂದಗೋಳ ತಾಲೂಕಿಗೆ ಭೇಟಿ ಕೊಟ್ಟು ಜನರ ಅಹವಾಲು ಆಲಿಸಿ, ಅಧಿಕಾರಿಗಳ ಸಭೆ ನಡೆಸಿದ್ದಾರೆ.
ಎಸ್..! ವೀಕ್ಷಕರೇ ಇಂದು ಕುಂದಗೋಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಸ್ನೇಹಲ್, ಆರ್ ಅವರು ಮೊದಲು ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಕೆಲವನ್ನು ಸ್ಥಳದಲ್ಲಿ ಇತ್ಯರ್ಥ ಪಡಿಸಿ ಬಾಕಿ ಪ್ರಕರಣ ವರದಿ ಪಡೆಯುವ ವಿಶ್ವಾಸ ವ್ಯಕ್ತಪಡಿಸಿದರು.
ಸಾರ್ವಜನಿಕರಿಂದ ಸಲ್ಲಿಕೆಯಾದ 25 ಲಿಖಿತ ಅಹವಾಲು 10 ಕ್ಕೂ ಹೆಚ್ಚು ಮೌಖಿಕ ಅಹವಾಲುಗಳನ್ನು ಕೂಲಂಕಷವಾಗಿ ಆಲಿಸಿ, ಇತ್ಯರ್ಥ ಪಡಿಸುವ ಭರವಸೆ ನೀಡಿದರು.
ಈ ಹಿಂದೆ ಜಿಲ್ಲಾಧಿಕಾರಿ ಸ್ನೇಹಲ್, ಆರ್ ಅವರು ಫೆಬ್ರುವರಿ.19 ರಂದು ಕುಂದಗೋಳ ತಾಲೂಕಿಗೆ ಭೇಟಿ ನೀಡುವ ದಿನಾಂಕ ನಿಗದಿಯಾಗಿ ರದ್ದಾಗಿತ್ತು, ಆ ಬಳಿಕ ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ಕುಂದಗೋಳಕ್ಕೆ ಯಾವಾಗ ಬರ್ತೀರಾ ಡಿಸಿ ಮೇಡಂ? ಎಂಬ ಶೀರ್ಷಿಕೆ ಅಡಿ ವರದಿ ಪ್ರಸಾರ ಮಾಡಿತ್ತು.
ಒಟ್ಟಾರೆ ಇದೀಗ ಜಿಲ್ಲಾಧಿಕಾರಿ ಸ್ನೇಹಲ್,ಆರ್ ಅವರು ಕುಂದಗೋಳ ಭೇಟಿ ನೀಡಿ ಜನರ ಅಹವಾಲು ಜೊತೆಗೆ ಅಧಿಕಾರಿಗಳ ಸಭೆ ನಡೆಸಿದ್ದಾರೆ.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಕುಂದಗೋಳ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/04/2026 06:40 pm
LOADING...