ಚಂಡೀಗಢದ ಬಿಜೆಪಿ ಪ್ರಧಾನ ಕಚೇರಿ ಹೊರಗೆ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಈ ಮಾಡ್ಯೂಲ್ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‌ಐ ಬೆಂಬಲಿತವಾಗಿದೆ ಎಂದು ತಿಳಿದುಬಂದಿದೆ.
ಪ್ರಕರಣದಲ್ಲಿ ಭಾಗಿಯಾಗಿರುವ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಈ ದಾಳಿಯಲ್ಲಿ ಭಾಗಿಯಾದ ಇಬ್ಬರು ದುಷ್ಕರ್ಮಿಗಳನ್ನು ಸಹ ಗುರುತಿಸಲಾಗಿದೆ. ಪೊಲೀಸರು ಇದುವರೆಗೆ ಒಂದು ಗ್ರೆನೇಡ್ ಅನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಗೌರವ್ ಯಾದವ್ ಮಾಹಿತಿ ನೀಡಿದ್ದಾರೆ.
ತನಿಖೆಯು ಮಾಡ್ಯೂಲ್‌ನ ಅಂತಾರಾಷ್ಟ್ರೀಯ ಸಂಪರ್ಕಗಳನ್ನು ಸಹ ಬಯಲು ಮಾಡಿದ್ದು, ಪೋರ್ಚುಗಲ್ ಮತ್ತು ಜರ್ಮನಿಯಲ್ಲಿ ವಿದೇಶಿ ಮೂಲದ ನಿರ್ವಾಹಕರನ್ನು ಗುರುತಿಸಲಾಗಿದೆ. ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳನ್ನು ಬಂಧಿಸಲು ಪೊಲೀಸರ ತಂಡಗಳು ಕಾರ್ಯಾಚರಣೆಗಳನ್ನು ಮುಂದುವರಿಸಿವೆ.
ಘಟನೆಯ ವಿವರ
ಕಳೆದ ಬುಧವಾರ (ಏಪ್ರಿಲ್ 1) ಸಂಜೆ 5 ಗಂಟೆ ಸುಮಾರಿಗೆ ಚಂಡೀಗಢದ ಸೆಕ್ಟರ್ 37ರಲ್ಲಿರುವ ಬಿಜೆಪಿ ಕಚೇರಿ ಬಳಿ ಈ ಸ್ಫೋಟ ಸಂಭವಿಸಿತ್ತು. ಕಚೇರಿಯ ಸಮೀಪಕ್ಕೆ ಶಂಕಿತ ಕಚ್ಚಾ ಸ್ಫೋಟಕ ಸಾಧನವನ್ನು ಎಸೆಯಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದೃಷ್ಟವಶಾತ್, ಈ ಸ್ಫೋಟದಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿರಲಿಲ್ಲ.
PublicNext
05/04/2026 11:07 am