ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಹಾರದ ಕಳ್ಳಭಟ್ಟು ಸೇವನೆ ಪ್ರಕರಣ - ಮೃತರ ಸಂಖ್ಯೆ 7ಕ್ಕೆ ಏರಿಕೆ

ಪಾಟ್ನಾ: ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ಕಳ್ಳಭಟ್ಟಿ ಸಾರಾಯಿ ಸೇವಿಸಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದವರಲ್ಲಿ ಮತ್ತಿಬ್ಬರು ಶನಿವಾರ ಮೃತಪಟ್ಟಿದ್ದಾರೆ. ಇದರೊಂದಿಗೆ, ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿದ್ದು, ಇತರ 14 ಮಂದಿ ಸಂತ್ರಸ್ತರ ಆರೋಗ್ಯ ಸ್ಥಿತಿ ಈಗಲೂ ಗಂಭೀರವಾಗಿದೆ.

ಗಂಭೀರ ಸ್ಥಿತಿಯಲ್ಲಿರುವ 14 ಮಂದಿ ಪೈಕಿ ಆರು ಮಂದಿ ಈಗಾಗಲೇ ದೃಷ್ಟಿ ಕಳೆದುಕೊಂಡಿದ್ದಾರೆ. ಹಲವರು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ತನಿಖಾಧಿಕಾರಿಗಳ ಮಾಹಿತಿ ಪ್ರಕಾರ, ಚಿಕಿತ್ಸೆ ಪಡೆಯುತ್ತಿದ್ದ ಲಾಲ್ ಕಿಶೋರ್ ರಾಯ್ ಮತ್ತು ಲಡ್ಡು ಶಾ ಶನಿವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಶುಕ್ರವಾರ ಪರೀಕ್ಷಣ್ ಮಾಝಿ, ಹೀರಾ ಲಾಲ್ ಭಗತ್ ಹಾಗೂ ಸಂಪತ್ ಶಾ ಮೃತಪಟ್ಟಿದ್ದರು. ಗುರುವಾರ ಚಂದು ಕುಮಾರ್ ಹಾಗೂ ಪ್ರಮೋದ್ ಯಾದವ್ ಜೀವ ಕಳೆದುಕೊಂಡಿದ್ದರು.

ಲೋಹಾ ಠಾಕೂರ್, ರವೀಂದ್ರ ಯಾದವ್, ದಿನೇಶ್ ಯಾದವ್, ಉಮೇಶ್ ರಾಮ್ ಸೇರಿದಂತೆ ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Edited By : Nagaraj Tulugeri
PublicNext

PublicNext

05/04/2026 03:43 pm

Cinque Terre

19.23 K

Cinque Terre

0