ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO : ಕುವೈತ್‌ಗೆ ಇರಾನ್ ಶಾಕ್ - ನೀರು-ವಿದ್ಯುತ್ ಘಟಕಗಳ ಮೇಲೆ ಡ್ರೋನ್ ದಾಳಿ, ಆತಂಕ!

ಕುವೈತ್‌ನಲ್ಲಿ ಇರಾನ್ ನಡೆಸಿದ ಡ್ರೋನ್ ದಾಳಿಯ ಪರಿಣಾಮವಾಗಿ, ಎರಡು ಪ್ರಮುಖ ವಿದ್ಯುತ್ ಉತ್ಪಾದನಾ ಘಟಕಗಳು ಮತ್ತು ಎರಡು ನೀರು ಶುದ್ಧೀಕರಣ ಘಟಕಗಳು ಕಾರ್ಯ ಸ್ಥಗಿತಗೊಳಿಸಿವೆ. ಈ ದಾಳಿಯಿಂದಾಗಿ ದೇಶದಲ್ಲಿ ಭಾರಿ ಆತಂಕ ಸೃಷ್ಟಿಯಾಗಿದೆ.

ಕುವೈತ್‌ನ ವಿದ್ಯುತ್, ನೀರು ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ವಕ್ತಾರರು ಈ ಘಟಕಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ದೃಢಪಡಿಸಿದ್ದಾರೆ.

ಸಚಿವಾಲಯದ ಹೇಳಿಕೆಯ ಪ್ರಕಾರ, ಈ ದಾಳಿಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ. "ವಿದ್ಯುತ್ ಮತ್ತು ನೀರಿನ ವ್ಯವಸ್ಥೆಗಳ ಸುರಕ್ಷತೆ ಹಾಗೂ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ತಾಂತ್ರಿಕ ಮತ್ತು ತುರ್ತು ತಂಡ ಅಧಿಕಾರಿಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ.

ಕುವೈತ್‌ನ ರಾಜ್ಯ ಮಾಧ್ಯಮವನ್ನು ಉಲ್ಲೇಖಿಸಿ ಅಲ್ ಜಜೀರಾ ವರದಿ ಮಾಡಿದಂತೆ, ಇತ್ತೀಚೆಗೆ ಶುಹೈಖ್ ತೈಲ ವಲಯ ಸಂಕೀರ್ಣದಲ್ಲಿ ಡ್ರೋನ್ ದಾಳಿಯಿಂದ ಬೆಂಕಿ ಕಾಣಿಸಿಕೊಂಡ ಘಟನೆಯ ಬೆನ್ನಲ್ಲೇ ಈ ಹೊಸ ದಾಳಿ ನಡೆದಿದ್ದು, ಇದು ಇರಾನ್‌ನಿಂದ ಸರಣಿ ದಾಳಿಗಳ ಸೂಚನೆಯಾಗಿದೆ.

ಕುವೈತ್ ತನ್ನ ಕುಡಿಯುವ ನೀರಿನ ಶೇ. 90ಕ್ಕೂ ಅಧಿಕ ಭಾಗವನ್ನು ಈ ಘಟಕಗಳಿಂದಲೇ ಪಡೆಯುವುದರಿಂದ, ಈ ದಾಳಿಗಳು ತೀವ್ರ ಪರಿಣಾಮ ಬೀರಬಹುದು.

Edited By : Abhishek Kamoji
PublicNext

PublicNext

05/04/2026 12:16 pm

Cinque Terre

38.51 K

Cinque Terre

1