ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

"ಶತ್ರುಗಳ ಕೋಟೆಯಲ್ಲಿ ಪೈಲಟ್ ರಕ್ಷಿಸಿದ ಅಮೆರಿಕ" : ಟ್ರಂಪ್ ನಾಯಕತ್ವಕ್ಕೆ ನೆತನ್ಯಾಹು ಸಲಾಂ

ಜೆರುಸಲೆಮ್: ಶತ್ರು ರಾಷ್ಟ್ರದ ವಶದಲ್ಲಿದ್ದ ಅಮೆರಿಕದ ಪೈಲಟ್‌ನನ್ನು ಅದ್ಭುತವಾಗಿ ರಕ್ಷಿಸಿದ ಅಮೆರಿಕದ ಸೈನಿಕರ ಸಾಹಸಕ್ಕೆ ಇಡೀ ವಿಶ್ವವೇ ಬೆರಗಾಗಿದೆ. ಈ ಐತಿಹಾಸಿಕ ರಕ್ಷಣಾ ಕಾರ್ಯಾಚರಣೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮುಕ್ತಕಂಠದಿಂದ ಶ್ಲಾಘಿಸಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಅಮೆರಿಕದ ಧೀರ ಯೋಧರು ನಡೆಸಿದ ಈ ಸಾಹಸಿಕ ಕಾರ್ಯಾಚರಣೆಯಿಂದ ಓರ್ವ ವೀರ ಪೈಲಟ್ ಮರಳಿ ಬಂದಿದ್ದಾನೆ. ಇದನ್ನು ಕಂಡು ಇಡೀ ಇಸ್ರೇಲ್ ಸಂಭ್ರಮಿಸುತ್ತಿದೆ" ಎಂದು ನೆತನ್ಯಾಹು ಟ್ವೀಟ್ ಮಾಡಿದ್ದಾರೆ.

"ಯಾವುದೇ ಒಬ್ಬ ಸೈನಿಕನನ್ನು ಶತ್ರುಗಳ ವಶದಲ್ಲಿ ಬಿಟ್ಟು ಬರುವುದಿಲ್ಲ ಎಂಬ ಪವಿತ್ರ ತತ್ವಕ್ಕೆ ಈ ಕಾರ್ಯಾಚರಣೆ ಸಾಕ್ಷಿಯಾಗಿದೆ" ಎಂದು ಭಾವನಾತ್ಮಕವಾಗಿ ನುಡಿದಿದ್ದಾರೆ.

ತಮ್ಮ ಹಳೆಯ ದಿನಗಳನ್ನು ಸ್ಮರಿಸಿದ ನೆತನ್ಯಾಹು, "ನಾನೂ ಕೂಡ ಇಂತಹದ್ದೇ ಒಂದು ರಕ್ಷಣಾ ಕಾರ್ಯಾಚರಣೆಯಲ್ಲಿ ಗಾಯಗೊಂಡಿದ್ದೆ. ಅಲ್ಲದೆ, ಪ್ರಸಿದ್ಧ 'ಎಂಟೆಬೆ' (Entebbe) ಕಾರ್ಯಾಚರಣೆಯಲ್ಲಿ ನನ್ನ ಸ್ವಂತ ಸಹೋದರನನ್ನು ನಾನು ಕಳೆದುಕೊಂಡಿದ್ದೆ. ಇಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಎಷ್ಟು ಎದೆಗಾರಿಕೆ ಬೇಕು ಎಂಬುದು ನನಗೆ ಗೊತ್ತು. ಟ್ರಂಪ್ ಅವರ ಧೈರ್ಯಶಾಲಿ ನಿರ್ಧಾರ ಅಮೆರಿಕಕ್ಕೆ ದೊಡ್ಡ ಗೆಲುವು ತಂದುಕೊಟ್ಟಿದೆ" ಎಂದಿದ್ದಾರೆ.

ಸ್ವಾತಂತ್ರ್ಯವನ್ನು ಬಯಸುವ ಸಮಾಜಗಳು ಒಗ್ಗಟ್ಟಾಗಿ, ಧೈರ್ಯದಿಂದ ಹೋರಾಡಿದರೆ ಭಯೋತ್ಪಾದನೆ ಮತ್ತು ಕತ್ತಲೆಯ ಶಕ್ತಿಗಳನ್ನು ಸೋಲಿಸಬಹುದು ಎಂಬುದನ್ನು ಈ ಕಾರ್ಯಾಚರಣೆ ನಿರೂಪಿಸಿದೆ ಎಂದು ಬಣ್ಣಿಸಿದ್ದಾರೆ.

Edited By :
PublicNext

PublicNext

05/04/2026 07:47 pm

Cinque Terre

11.6 K

Cinque Terre

0