ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೆರಿಕವನ್ನು 'ಮಹಾ ಸೈತಾನ' ಎಂದ ಸುಲೈಮಾನಿ ಸೋದರ ಸೊಸೆ & ಮೊಮ್ಮಗಳ ಬಂಧನ!

ಲಾಸ್ ಏಂಜಲೀಸ್: ಅಮೆರಿಕವನ್ನು 'ಮಹಾ ಸೈತಾನ' ಎಂದು ನಿರಂತರವಾಗಿ ಜರಿಯುತ್ತಲೇ, ಅದರ ನೆಲದಲ್ಲಿಯೇ ಐಷಾರಾಮಿ ಜೀವನ ನಡೆಸುತ್ತಿದ್ದ ಇರಾನ್‌ನ ಮಾಜಿ ಜನರಲ್ ಖಾಸಿಂ ಸುಲೈಮಾನಿಯ ಸೋದರ ಸೊಸೆ ಹಮೀದಾ ಸುಲೈಮಾನಿ ಅಫ್ಶರ್ ಮತ್ತು ಅವರ ಮೊಮ್ಮಗಳು ಸರಿನಾಸಾದತ್ ಹೊಸೇನಿ (25) ಅವರನ್ನು ಅಮೆರಿಕದ ವಲಸೆ ಅಧಿಕಾರಿಗಳು (ICE) ಬಂಧಿಸಿದ್ದಾರೆ.

ಅಮೆರಿಕವನ್ನು ಟೀಕಿಸುತ್ತಲೇ ಅಲ್ಲಿಯೇ ಐಷಾರಾಮಿ ಜೀವನ ನಡೆಸುತ್ತಿದ್ದ ಇರಾನ್‌ನ ಮಾಜಿ ಜನರಲ್ ಖಾಸಿಂ ಸುಲೈಮಾನಿಯ ಸೋದರ ಸೊಸೆ ಹಾಗೂ ಮೊಮ್ಮಗಳನ್ನು ಅಮೆರಿಕದ ವಲಸೆ ಅಧಿಕಾರಿಗಳು (ICE) ಬಂಧಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಲಾಸ್ ಏಂಜಲೀಸ್‌ನಲ್ಲಿ ನೆಲೆಸಿದ್ದ ಈ ಮಹಿಳೆಯರಿಗೆ ಬೈಡನ್ ಸರ್ಕಾರದ ಅವಧಿಯಲ್ಲಿ ಗ್ರೀನ್ ಕಾರ್ಡ್ ನೀಡಲಾಗಿತ್ತು. ಆದರೆ, ಇತ್ತೀಚೆಗೆ ಇದನ್ನು ರದ್ದುಗೊಳಿಸಲಾಗಿದೆ.

"ನಮ್ಮ ಸೈನಿಕರ ಮೇಲೆ ನಡೆಯುವ ದಾಳಿಗಳನ್ನು ಸಂಭ್ರಮಿಸುವವರಿಗೆ ಅಮೆರಿಕದ ನೆಲದಲ್ಲಿ ಜಾಗವಿಲ್ಲ" ಎಂದು ಈ ಕುರಿತು ಪ್ರತಿಕ್ರಿಯಿಸಿದ ಸೆನೆಟರ್ ರೂಬಿಯೋ ಗುಡುಗಿದ್ದಾರೆ. ಅಲ್ಲದೆ, ಬಂಧಿತ ಮಹಿಳೆಯರು ರಾಜಕೀಯ ಆಶ್ರಯ ಪಡೆಯಲು ಸುಳ್ಳು ಮಾಹಿತಿ ನೀಡಿದ್ದರು ಎಂಬುದು ಕೂಡ ತನಿಖೆಯಿಂದ ಸಾಬೀತಾಗಿದೆ. ಸದ್ಯ, ಇವರನ್ನು ಇರಾನ್‌ಗೆ ಗಡಿಪಾರು ಮಾಡುವ ಪ್ರಕ್ರಿಯೆ ಆರಂಭವಾಗಿದೆ.

Edited By :
PublicNext

PublicNext

05/04/2026 10:47 pm

Cinque Terre

11.26 K

Cinque Terre

0