ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೆರಿಕದಲ್ಲಿ ಐಷಾರಾಮಿ : ಇರಾನ್ ಕ್ರೂರತೆಗೆ ಬೆಂಬಲ - ಸುಲೈಮಾನಿ ಮೊಮ್ಮಗಳ ಗ್ರೀನ್ ಕಾರ್ಡ್ ರದ್ದು

ವಾಷಿಂಗ್ಟನ್/ಲಾಸ್ ಏಂಜಲೀಸ್: ಅಮೆರಿಕದ ವಿರುದ್ಧ ನಿರಂತರವಾಗಿ ದ್ವೇಷ ಕಾರುತ್ತಿದ್ದ ಇರಾನ್‌ನ ಮಾಜಿ ಸೇನಾ ಮುಖ್ಯಸ್ಥ ಖಾಸಿಂ ಸುಲೈಮಾನಿಯ ಮೊಮ್ಮಗಳು ಸರಿನಾಸಾದತ್ ಹೊಸೇನಿ (25) ಮತ್ತು ಆಕೆಯ ತಾಯಿ ಹಮೀದಾ ಸುಲೈಮಾನಿ ಅಫ್ಶರ್ ಅವರ 'ಗ್ರೀನ್ ಕಾರ್ಡ್' ಅನ್ನು ಅಮೆರಿಕ ಸರ್ಕಾರ ರದ್ದುಗೊಳಿಸಿದೆ.

ಲಾಸ್ ಏಂಜಲೀಸ್‌ನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಇವರನ್ನು ಇದೀಗ ಅಮೆರಿಕದ ವಲಸೆ ಅಧಿಕಾರಿಗಳು (ICE) ಬಂಧಿಸಿದ್ದು, ಶೀಘ್ರದಲ್ಲೇ ಗಡಿಪಾರು ಮಾಡುವ ಸಾಧ್ಯತೆಯಿದೆ. ಅಮೆರಿಕದಲ್ಲಿ ಐಷಾರಾಮಿ ಜೀವನ ನಡೆಸುತ್ತಲೇ, ಇರಾನ್‌ನ ಕ್ರೂರ ಆಡಳಿತಕ್ಕೆ ಬೆಂಬಲ ನೀಡಿದ್ದ ಜನರಲ್ ಸುಲೈಮಾನಿ ಮೊಮ್ಮಗಳ 'ಗ್ರೀನ್ ಕಾರ್ಡ್' ಅನ್ನು ರದ್ದುಗೊಳಿಸಿ, ಗಡಿಪಾರಿಗೆ ಅಮೆರಿಕ ಸಿದ್ಧತೆ ನಡೆಸಿದೆ.

ಸರಿನಾಸಾದತ್ ಹೊಸೇನಿ ಅಮೆರಿಕದಲ್ಲಿ ಅತಿ ಶ್ರೀಮಂತ ಜೀವನ ನಡೆಸುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಆಧುನಿಕ ಉಡುಗೆ ತೊಟ್ಟು ಪಾರ್ಟಿ ಮಾಡುತ್ತಿರುವ ಅವರ ಚಿತ್ರಗಳು ವ್ಯಾಪಕವಾಗಿ ಹರಿದಾಡಿದ್ದವು. ಆದರೆ, ಇದೇ ಸರಿನಾಸಾದತ್ ಇರಾನ್‌ನಲ್ಲಿ ಹಿಜಾಬ್ ಧರಿಸದ ಮಹಿಳೆಯರನ್ನು ಚಿತ್ರಹಿಂಸೆ ನೀಡಿ ಕೊಲ್ಲುವ ಕ್ರೂರ ಇಸ್ಲಾಮಿಕ್ ಆಡಳಿತವನ್ನು ಸಾರ್ವಜನಿಕವಾಗಿ ಬೆಂಬಲಿಸುತ್ತಿದ್ದರು ಎಂಬ ಆಘಾತಕಾರಿ ಸತ್ಯ ಈಗ ಬಯಲಾಗಿದೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರ ಆದೇಶದಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ. "ಅಮೆರಿಕದಲ್ಲಿ ವಾಸಿಸುತ್ತಾ ಇಲ್ಲಿನ ಸ್ವಾತಂತ್ರ್ಯವನ್ನು ಅನುಭವಿಸುವ ಈ ಮಹಿಳೆಯರು, ಅಮೆರಿಕವನ್ನು 'ಮಹಾ ಸೈತಾನ' ಎಂದು ಕರೆಯುತ್ತಿದ್ದರು. ಅಲ್ಲದೆ, ಅಮೆರಿಕದ ಸೈನಿಕರ ಮೇಲಿನ ದಾಳಿಗಳನ್ನು ಸಂಭ್ರಮಿಸುತ್ತಿದ್ದರು. ಇಂತಹ ದ್ವಂದ್ವ ನೀತಿಯನ್ನು ಹೊಂದಿರುವವರಿಗೆ ನಮ್ಮ ದೇಶದಲ್ಲಿ ಯಾವುದೇ ಸ್ಥಾನವಿಲ್ಲ," ಎಂದು ರೂಬಿಯೋ ಖಡಾಖಂಡಿತವಾಗಿ ಹೇಳಿದ್ದಾರೆ.

ತನಿಖೆಯ ವೇಳೆ, ಇವರು ಅಮೆರಿಕದಲ್ಲಿ ರಾಜಕೀಯ ಆಶ್ರಯ ಪಡೆಯಲು ಸುಳ್ಳು ಮಾಹಿತಿ ನೀಡಿದ್ದರು ಎಂಬುದು ಬೆಳಕಿಗೆ ಬಂದಿದೆ. ಇರಾನ್‌ನಲ್ಲಿ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಸುಳ್ಳು ಹೇಳಿ ಅಮೆರಿಕಕ್ಕೆ ಬಂದಿದ್ದ ಈ ಮಹಿಳೆಯರು, ಗ್ರೀನ್ ಕಾರ್ಡ್ ಪಡೆದ ನಂತರ ಹಲವು ಬಾರಿ ಇರಾನ್‌ಗೆ ಭೇಟಿ ನೀಡಿ ಮರಳಿರುವ ವಂಚನೆಯನ್ನು ಸ್ಪಷ್ಟವಾಗಿ ಸಾಬೀತುಪಡಿಸಿದೆ.

Edited By :
PublicNext

PublicNext

05/04/2026 10:18 pm

Cinque Terre

11.82 K

Cinque Terre

0