ಬೆಂಗಳೂರು: ನಟ ಸುದೀಪ್, ನಿರ್ಮಾಪಕರಾದ ಎಂ.ಎನ್. ಕುಮಾರ್ ಮತ್ತು ಎಂ.ಎನ್. ಸುರೇಶ್ ವಿರುದ್ಧ ಸಲ್ಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ನ್ಯಾಯಾಲಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ.
ನಿನ್ನೆ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ 7ನೇ ಎಸಿಜೆಎಂ ನ್ಯಾಯಾಲಯಕ್ಕೆ ಹಾಜರಾಗಿದ್ದ ನಟ ಸುದೀಪ್ ನಿರ್ಮಾಪಕರ ಪರ ವಕೀಲರು ಕ್ರಾಸ್ ಎಕ್ಸಾಮಿನೇಷನ್‌ಗೆ ಒಳಪಡಿಸಿದರು. ನಿರ್ಮಾಪಕರು ಸುದೀಪ್ ವಿರುದ್ಧ, "ಸಿನಿಮಾ ಕಾಲ್‌ಶೀಟ್ ನೀಡಲು 9 ಕೋಟಿ ರೂಪಾಯಿ ಪಡೆದಿದ್ದಾರೆ" ಎಂದು ಆರೋಪಿಸಿದ್ದರು. ಈ ಆರೋಪಗಳ ವಿರುದ್ಧ ಸುದೀಪ್ 2023ರಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಪ್ರಸ್ತುತ ಪ್ರಕರಣವು ಎವಿಡೆನ್ಸ್ ಹಂತದಲ್ಲಿದ್ದು, ನಿನ್ನೆಯ ವಿಚಾರಣೆಯ ನಂತರ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು 2026ರ ಜೂನ್ 6ಕ್ಕೆ ಮುಂದೂಡಿದೆ.
PublicNext
05/04/2026 11:15 am
LOADING...