ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಜಮೀನಿನ ವಿಚಾರವಾಗಿ ಪ್ರತಾಪ್ ಮೇಲೆ ಆಗಿದ್ದ ಗಂಭೀರ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್

ಬೆಂಗಳೂರು: ತಮ್ಮದೇ ಪಕ್ಷದ ವಕೀಲ ಪ್ರತಾಪ್ ಮೇಲಿನ ಹಲ್ಲೆಗೆ ಬಿಜೆಪಿ ಶಾಸಕನಿಂದಲೇ ಪ್ಲಾನ್ ಮಾಡಿರುವ ಆರೋಪ ಕೇಳಿ ಬಂದಿದೆ.

ಹಲ್ಲೆಗೆ ದೊಡ್ಡಬಳ್ಳಾಪುರ ಬಿಜೆಪಿ ಶಾಸಕ ಧೀರಜ್ ಮುನಿರಾಜು ನೇರ ಕಾರಣ ಅಂತ ವಕೀಲನಿಂದ ಆರೋಪ ಕೇಳಿಬಂದಿದೆ. ಹಲವು ವರ್ಷಗಳಿಂದ ಬಿಜೆಪಿಯಲ್ಲಿ ಕಾರ್ಯಕರ್ತನಾಗಿ ವಕೀಲ ಪ್ರತಾಪ್ ಗುರುತಿಸಿಕೊಂಡಿದ್ದ. ತಮ್ಮದೇ ಪಕ್ಷದ ಕಾರ್ಯಕರ್ತನ ಮೇಲೆ ಷಡ್ಯಂತ್ರ ರೂಪಿಸಿದ್ರಾ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜ್? ಎಂಬ ಪ್ರಶ್ನೆ ಮೂಡಿದೆ.

ಧೀರಜ್ ಮುನಿರಾಜು ನಡೆಗೆ ಬಿಜೆಪಿ ಕಾರ್ಯಕರ್ತನಿಂದ ವಾಗ್ದಾಳಿ ನಡೆದಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನ ದಡಘಟ್ಟಮಡಗು ಗ್ರಾಮದಲ್ಲಿ ನಡೆದಿದ್ದ ಘಟನೆಗೆ ಧೀರಜ್ ಕಾರಣ ಅಂತ ಬಿಜೆಪಿ ಕಾರ್ಯಕರ್ತ ಆರೋಪ ಮಾಡಿದ್ದಾರೆ.

ಆರೋಪಿಗಳು ಹಲ್ಲೆಗೂ ಮುನ್ನ ಶಾಸಕ ಧೀರಜ್ ಮುನಿರಾಜು ಭೇಟಿಯಾಗಿದ್ರಂತೆ, ಜಮೀನಿನ ಕಾಂಪೌಂಡ್ ನಿರ್ಮಾಣಕ್ಕೆ ಅಡ್ಡಿಪಡಿಸಿ ಆಮೇಲೆ ಅವರೇ ರಾಜಿಗೆ ಬರ್ತಾರೆ ಅಂತ ಆರೋಪಿಗಳಿಗೆ ಶಾಸಕ ಧೀರಜ್ ಹೇಳಿದ್ರಂತೆ. ಶಾಸಕರ ಮಾತು ಕೇಳಿ ಅಡ್ಡಿಪಡಿಸಲು ಬಂದಾಗ ವಾಗ್ವಾದ ನಡೆದು ಪ್ರತಾಪ್ ಮೇಲೆ ಮರಣಾಂತಿಕ ಹಲ್ಲೆ ನಡೆಸಿದ್ದಾರೆ.

ಹಲ್ಲೆಗೆ ಪ್ರಚೋದನೆ ಕೊಟ್ಟು ಕೌಂಟರ್ FIR ಮಾಡಿಸಲು ಪೊಲೀಸರ ಮೇಲೆ ಧೀರಜ್ ಒತ್ತಡ ಹೇರಿರುವ ಆರೋಪ ಕೇಳಿಬಂದಿದೆ. ಈ ವಿಚಾರ ವಕೀಲ ಪ್ರತಾಪ್ ಅವರಿಗೆ ಶಾಸಕರ ಆಪ್ತರಿಂದಲೇ ಮಾಹಿತಿ ಸೋರಿಕೆಯಾಗಿದ್ದು, ಮಾಹಿತಿ ಪಡೆದು ಫೋನ್ ಮಾಡಿದಾಗ ಸೆಟಲ್ಮೆಂಟ್ ಮಾಡೋಣ ಅಂತ ಧೀರಜ್ ಹೇಳಿದ್ದಾರೆ. ಹಾಗಾಗಿ ನನ್ನ ಮೇಲೆ ಮರಣಾಂತಿಕ ಹಲ್ಲೆ ಆಗಲು ಶಾಸಕ ಧೀರಜ್ ಕಾರಣ ಎಂದು ವಕೀಲ ಪ್ರತಾಪ್ ಆಕ್ರೋಶ ಹೊರಹಾಕಿದ್ದಾರೆ.

Edited By :
PublicNext

PublicNext

05/04/2026 02:23 pm

Cinque Terre

7.01 K

Cinque Terre

0