ಬೆಂಗಳೂರು : ರಾಮೇಶ್ವರಸ್ವಾಮಿ ಸಿದ್ದೇಶ್ವರ ಸ್ವಾಮಿ ಅದ್ದೂರಿ ಜಾತ್ರಾ ಮಹೋತ್ಸವದ ವೇಳೆ ದೇವಾಲಯಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದಾರೆ.
ಸಚಿವ ಬೈರತಿ ಸುರೇಶ್ ಕುಲ ದೇವರ ಆರಾಧನೆ ಹಾಗೂ ಜಾತ್ರಾ ಮಹೋತ್ಸವದಲ್ಲಿ ಸಿದ್ದು ಭಾಗಿ ಆಗಿದ್ದಾರೆ. ಹೊಸಕೋಟೆ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ನಡೆಯುತ್ತಿರುವ ಜಾತ್ರೆಯಲ್ಲಿ ಈಗಾಗಲೇ ಸಾವಿರಾರು ಜನ ಭಾಗಿ ಆಗಿದ್ದಾರೆ. ಜಾತ್ರೆಯಲ್ಲಿ ಬೈರತಿ ಸುರೇಶ್, ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್, ಶಾಸಕ ಶರತ್ ಬಚ್ಚೇಗೌಡ, ಶಾಸಕ ನಂಜೇಗೌಡ, ಕೊತ್ತೂರು ಮಂಜುನಾಥ್ ಭಾಗಿ ಆಗಿದ್ರು.
ದೇವರ ಪೂಜೆ ನೆರವೇರಿಸಿ ವೇದಿಕೆಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ವಿಡಿಯೋ ವೈರಲ್ ಆಗುತ್ತಿದೆ. ದೇವರ ಪೂಜೆಯಲ್ಲಿ ಸಿದ್ದು ಭಾಗಿಯಾಗಿದ್ದೇ ಚರ್ಚೆಗೆ ಕಾರಣ ಆಗಿದೆ.
PublicNext
05/04/2026 05:12 pm
LOADING...