ಬೆಂಗಳೂರು:- ಆಟೋ LPG ಕೊರತೆ ಕಾರಣ ಆಟೋ ಚಾಲಕರು ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ನಗರದಾದ್ಯಂತ ಬೆಳಿಗ್ಗೆ 4 ಗಂಟೆಯಿಂದ ಕಾಯ್ತಾ ಇರೋ ಚಾಲಕರು LPG ಅಲಭ್ಯತೆ ಬಗ್ಗೆ ಸಚಿವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಣ್ಣು ಹಾಯಿಸಿದ ಕಡೆಯೆಲ್ಲಾ ಬರೀ ಆಟೋಗಳು ಕಾಣಿಸ್ತಾ ಇದೆ. ಆದರೆ ಸಚಿವರು ಮಾತ್ರ ಬೆಂಗಳೂರಿನಲ್ಲಿ ಆಟೋ LPG ಅಭಾವ ಇಲ್ಲ ಅಂತಾರೆ. ಸಚಿವರು ಗ್ರೌಂಡ್ ರಿಯಾಲಿಟಿ ತಿಳಿದುಕೊಳ್ಳಬೇಕು ಅಂತ ಕಿಡಿಕಾರಿದ್ದಾರೆ. ಆಟೋ LPG ಅಭಾವ ಇಲ್ಲ ಎಂದ ಸಚಿವರ ಮುನಿಯಪ್ಪ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
PublicNext
05/04/2026 04:41 pm
LOADING...