ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಿಳಾ ಕಸ್ಟಮ್ ಅಧಿಕಾರಿ ಮೇಲೆ ನಿರಂತರ ಅತ್ಯಾಚಾರ : ಎಂ. ಕೃಪಲಾನಿ ಅರೆಸ್ಟ್ : ಈತನ ಮೇಲಿವೆ ಸಾಲು ಸಾಲು ಪ್ರಕರಣಗಳು.!

ಬೆಂಗಳೂರು: ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಸರ್ಕಾರಿ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿರುವ ಮಹಿಳಾ ಅಧಿಕಾರಿಯೊಬ್ಬರ ಮೇಲೆಯೇ ಅತ್ಯಾಚಾರದ ಯತ್ನ ನಡೆದಿದೆ. ಈ ಸಂಬಂಧ ಕಸ್ಟಮ್ಸ್ ಇಲಾಖೆಯ ಮಹಿಳಾ ಸುಪರಿಂಟೆಂಡೆಂಟ್ ನೀಡಿದ ದೂರಿನ ಮೇರೆಗೆ, ಆರೋಪಿ ಎಂ. ಕೃಪಲಾನಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಈತನ ಮೇಲೆ ಕೇವಲ ಅತ್ಯಾಚಾರ ಆರೋಪ ಅಷ್ಟೇ ಅಲ್ಲ ಸಾಲು ಸಾಲು ದೂರು ದಾಖಲಾಗಿವೆ. ಈ ಹಿಂದೆ ನ್ಯಾಯಾಲಯವನ್ನೇ ಹಾದಿ ತಪ್ಪಿಸಲು ಹೋಗಿ ಉಗಿಸಿಕೊಂಡಿದ್ದ ಈ ಕೃಪಲಾನಿ ಕೋರ್ಟ್‌ಗೆ 2 ಲಕ್ಷ ದಂಡ ಕಟ್ಟಿದ್ದ.

ಎಲೆಕ್ಟ್ರಾನಿಕ್ ಬ್ಯುಸಿನೆಸ್ ನಡೆಸುತ್ತಿದ್ದ ಕೃಪಲಾನಿ ಕಸ್ಟಮ್ಸ್ ಕಣ್ತಪ್ಪಿಸಿ ಸಾಕಷ್ಟು ವ್ಯವಹಾರ ನಡೆಸುತ್ತಿದ್ದನಂತೆ. ಹೀಗಿರುವಾಗ 9 ವರ್ಷದ ಹಿಂದೆ ಮಹಿಳಾ ಕಸ್ಟಮ್ಸ್ ಅಧಿಕಾರಿಯನ್ನು ಪರಿಚಯ ಮಾಡಿಕೊಂಡಿದ್ದನಂತೆ. ಆಕೆ ಜೊತೆಗೆ ಪ್ರೀತಿ ನಾಟಕವಾಡಿ ಆಕೆ ಜೊತೆಗೆ ಸಲುಗೆ ಬೆಳೆಸಿದನಂತೆ. ಮದುವೆ ಆಮಿಷವೊಡ್ಡಿ ಆ ಮಹಿಳಾ ಅಧಿಕಾರಿಯ ಕೆಲ ಲೂಪ್‌ಹೋಲ್‌ಗಳ ಸಂಗ್ರಹಿಸಿ ಆಕೆಯ ಮುಖಾಂತರ ಕಸ್ಟಮ್ಸ್‌ನ ಕಣ್ತಪ್ಪಿಸಿ ಬ್ಯುಸಿನೆಸ್ ನಡೆಸುತ್ತಿದ್ದನಂತೆ. ಅಷ್ಟೇ ಅಲ್ಲದೆ ಆ ಮಹಿಳಾ ಅಧಿಕಾರಿಯನ್ನು ಬ್ಲಾಕ್ ಮೇಲ್ ಮಾಡಿ ಆಕೆಯನ್ನು ಬಳಸಿಕೊಂಡು ಕೆಲ ಕಸ್ಟಮ್ಸ್ ಅಧಿಕಾರಿಗಳ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಅವರಿಂದ ಹಣ ಪಡೆದಿದ್ದಾನಂತೆ. ಇಷ್ಟೆಲ್ಲಾ ಆದರೂ ಮಹಿಳಾ ಅಧಿಕಾರಿಗೆ ಬ್ಲಾಕ್ ಮೇಲ್ ಮಾಡಿ ಆಕೆಯನ್ನು ಲೈಂಗಿಕ ತೃಷೆಗೆ ಬಳಸಿಕೊಂಡು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ, ತಾನು ಹೇಳಿದಂತೆ ಕೇಳದೆ ಹೋದರೆ ಮಹಿಳಾ ಅಧಿಕಾರಿಯ ಖಾಸಗಿ ಫೋಟೋ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದನಂತೆ. ಇದರಿಂದ ರೋಸಿಹೋದ ಮಹಿಳಾ ಅಧಿಕಾರಿ, ಕೃಪಲಾನಿ ವಿರುದ್ಧ ಯಲಹಂಕ ಠಾಣೆಯಲ್ಲಿ ಅತ್ಯಾಚಾರದ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ಇಂದಿರಾನಗರ ಠಾಣೆಗೆ ವರ್ಗಾವಣೆಗೊಂಡಿದ್ದು ಈ ತನಿಖೆಯ ಜವಾಬ್ದಾರಿಯನ್ನು ಹಿರಿಯ ಅಧಿಕಾರಿಗಳು ಎಸಿಪಿ ಪುಲಕೇಶಿ ನಗರ ಹಾಗೂ ಪುಲಕೇಶಿ ಇನ್ಸ್‌ಪೆಕ್ಟರ್ ಹೆಗಲಿಗೆ ವಹಿಸಿದರು. ತನಿಖೆ ನಡೆಸಿದ ಪೊಲೀಸರು ಆರೋಪಿ ಕೃಪಲಾನಿಯನ್ನು ಬಂಧಿಸಿದ್ದಾರೆ.

ಇನ್ನು ಈ ಕೃಪಲಾನಿ ತಾಯಿ ಈ ಹಿಂದೆ ಕೋರ್ಟ್‌ಗೆ ತಮ್ಮ ಮಗ ಕಾಣೆಯಾಗಿದ್ದಾನೆ ಎಂದು ಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಕೂಡ ಸಲ್ಲಿಕೆ ಮಾಡಿದ್ದರು. ಈ ವಿಚಾರವಾಗಿ ತನಿಖೆ ನಡೆಸಿದಾಗ ಕೃಪಲಾನಿ ಉದ್ದೇಶ ಪೂರ್ವಕವಾಗಿ ಹೋಟೆಲ್ ಒಂದರಲ್ಲಿ ಅಡಗಿದ್ದನ್ನು ಪೊಲೀಸರು ಪತ್ತೆ ಮಾಡಿದರು. ಈ ವೇಳೆ ಕೋರ್ಟ್ ಕೃಪಲಾನಿಗೆ ಎರಡು ಲಕ್ಷ ದಂಡ ವಿಧಿಸಿತ್ತು.

ಅಷ್ಟೇ ಅಲ್ಲದೆ ದಶಕದ ಹಿಂದೆ ಕುಡಿದು ಮಹಿಳಾ ಅಧಿಕಾರಿಗಳ ಜೊತೆ ಅಸಭ್ಯವಾಗಿ ವರ್ತಿಸಿ ಆ ಮಹಿಳಾ ಅಧಿಕಾರಿಗಳ ಮೇಲೂ ಸುಳ್ಳು ಆರೋಪ ಮಾಡಿರುವ ಆರೋಪ ಇದೆ.

ಇನ್ನು ಕೃಪಲಾನಿ ಜಾಲಕ್ಕೆ ಹಲವು ಕಸ್ಟಮ್ಸ್ ಅಧಿಕಾರಿಗಳು ಸಿಲುಕಿ ನರಳಿದ್ದು ಈತನಿಂದ ಯಾರಿಗಾದರೂ ಅನ್ಯಾಯವಾಗಿದ್ದರೆ ಅಂತಹವರು ಬಂದು ಖುದ್ದು ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Edited By :
PublicNext

PublicNext

04/04/2026 08:20 pm

Cinque Terre

13.01 K

Cinque Terre

0

ಸಂಬಂಧಿತ ಸುದ್ದಿ