ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರೀತಿ ನಿರಾಕರಿಸಿದ್ದಕ್ಕೆ ಕೆಲಸದಿಂದ ವಜಾ, ಸಲೂನ್ ಮಾಲೀಕನಿಗೆ ಬ್ಯೂಟಿಷಿಯನ್ ಪತಿಯಿಂದ ಹಲ್ಲೆ!

ಬೆಂಗಳೂರು: ಸಲೂನ್‌ನಲ್ಲಿ ಮಾಲೀಕನೊಬ್ಬ ಬ್ಯೂಟಿಷಿಯನ್‌ಗೆ ಪ್ರಪೋಸ್ ಮಾಡಿದ್ದು, ಆಕೆ ನಿರಾಕರಿಸಿದ ಕಾರಣಕ್ಕೆ ಕೆಲಸದಿಂದ ತೆಗೆದುಹಾಕಿದ್ದಾನೆ. ಇದರಿಂದ ಕುಪಿತಗೊಂಡ ಬ್ಯೂಟಿಷಿಯನ್ ಪತಿ ತನ್ನ ಗ್ಯಾಂಗ್‌ನೊಂದಿಗೆ ಸಲೂನ್‌ಗೆ ನುಗ್ಗಿ ಮಾಲೀಕ ಮತ್ತು ಆತನ ಪತ್ನಿಯ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾನೆ.

ಆವಲಹಳ್ಳಿ ಸ್ಕಿನ್ ಶೈನ್ ಫ್ಯಾಮಿಲಿ ಸಲೂನ್ ಮಾಲೀಕ ಮೋಹನ್ ಕುಮಾರ್, ತಮ್ಮಲ್ಲಿ ಕೆಲಸ ಮಾಡುತ್ತಿದ್ದ ಬ್ಯೂಟಿಷಿಯನ್ ಸುಷ್ಮಾಗೆ ಬಿಸ್ಕೆಟ್ ನೀಡಿ ಪ್ರಪೋಸ್ ಮಾಡಿದ್ದ ಎನ್ನಲಾಗಿದೆ. ಆದರೆ, ಮೋಹನ್ ಕುಮಾರ್ ಪ್ರಪೋಸಲ್ ಅನ್ನು ಸುಷ್ಮಾ ಒಪ್ಪಿಕೊಂಡಿರಲಿಲ್ಲ. ಪ್ರಪೋಸಲ್ ನಿರಾಕರಿಸಿದ್ದಕ್ಕೆ ಕೋಪಗೊಂಡ ಮಾಲೀಕ ಮೋಹನ್, ಸುಷ್ಮಾರನ್ನು ಕೆಲಸದಿಂದ ತೆಗೆದುಹಾಕಿದ್ದ.

ತನ್ನ ಪತ್ನಿಯನ್ನು ಕೆಲಸದಿಂದ ತೆಗೆದುಹಾಕಿದ್ದಕ್ಕೆ ಕುಪಿತಗೊಂಡ ಸುಷ್ಮಾ ಪತಿ, ನಾಲ್ಕೈದು ಜನರ ಗುಂಪು ಕಟ್ಟಿಕೊಂಡು ಆವಲಹಳ್ಳಿಯ ಸ್ಕಿನ್ ಶೈನ್ ಫ್ಯಾಮಿಲಿ ಸಲೂನ್‌ಗೆ ನುಗ್ಗಿದ್ದಾರೆ. ಅಲ್ಲಿ ಸಲೂನ್ ಮಾಲೀಕ ಮೋಹನ್ ಕುಮಾರ್ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ.

ಗಲಾಟೆ ತಡೆಯಲು ಬಂದ ಮೋಹನ್ ಪತ್ನಿ ಶ್ರೀಜಾ ಅವರ ಕುತ್ತಿಗೆಗೆ ಕೈ ಹಾಕಿ ಹಲ್ಲೆ ನಡೆಸಿದ್ದಾರೆ. ಎಷ್ಟು ತಡೆದರೂ, ಬಂದವರೆಲ್ಲರೂ ಒಂದೊಂದು ಏಟು ಹಾಕಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸುಷ್ಮಾ ಪತಿ ಮತ್ತು ಆತನ ಗ್ಯಾಂಗ್ ನಡೆಸಿದ ಈ ಸಂಪೂರ್ಣ ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಸಂಬಂಧ ಸಲೂನ್ ಮಾಲೀಕ ಮೋಹನ್ ಕುಮಾರ್ ಅವರು ಸುಷ್ಮಾ, ಆಕೆಯ ಪತಿ ಹಾಗೂ ಆತನ ಬೆಂಬಲಿಗರ ವಿರುದ್ಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹಲ್ಲೆ ನಡೆಸಿ ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.

Edited By :
PublicNext

PublicNext

04/04/2026 03:54 pm

Cinque Terre

8.61 K

Cinque Terre

0

ಸಂಬಂಧಿತ ಸುದ್ದಿ