ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ನಿವಾಸಿಗಳೇ ಎಚ್ಚರ.! : ಕೆ.ಜಿ.ಹಳ್ಳಿಯಲ್ಲಿ ಸೆರೆಯಾಯ್ತು ಡಿಫರೆಂಟ್ ಶೈಲಿಯ ಕಳ್ಳತನ!

ಬೆಂಗಳೂರು: ಸಿಲಿಕಾನ್ ಸಿಟಿ ಜನರೇ ಸ್ವಲ್ಪ ಇತ್ತ ಗಮನಿಸಿ! ಬೆಂಗಳೂರಿನ ಕಳ್ಳರು ಈಗ ಅಪ್‌ಡೇಟ್ ಆಗಿದ್ದಾರೆ. ಕಳ್ಳತನ ಮಾಡಲು ಅವರು ಬಳಸುತ್ತಿರುವ ಹೊಸ ಹೊಸ ಐಡಿಯಾಗಳನ್ನು ನೋಡಿದರೆ ನೀವೂ ಶಾಕ್ ಆಗ್ತೀರಾ. ಇಂತಹುದೇ ಒಂದು ವಿಚಿತ್ರ ಹಾಗೂ ಅಷ್ಟೇ ನವೀನ ಮಾದರಿಯ ಕಳ್ಳತನದ ದೃಶ್ಯ ಈಗ ಕೆ.ಜಿ. ಹಳ್ಳಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕಳೆದ ಮಾರ್ಚ್ 12 ರಂದು ನಡೆದಿರುವ ಈ ಘಟನೆಯಲ್ಲಿ ಇಬ್ಬರು ಯುವಕರು ಕಟ್ಟಡವೊಂದರ ಹೊರಗಡೆ ಇದ್ದ ವಿದ್ಯುತ್ ಬಲ್ಬ್ ಅನ್ನು ಕದಿಯಲು 'ಪಿಗ್ಗಿಬ್ಯಾಕ್' (Piggyback) ವಿಧಾನವನ್ನು ಬಳಸಿದ್ದಾರೆ! ಅಂದರೆ, ಯುವಕನೋರ್ವ ಮತ್ತೊಬ್ಬನ ಹೆಗಲ ಮೇಲೆ ಹತ್ತಿ ಕುಳಿತುಕೊಳ್ಳುತ್ತಾನೆ. ನೋಡುವವರಿಗೆ ಅವರಿಬ್ಬರೂ ಏನೋ ಆಟವಾಡುತ್ತಿದ್ದಾರೆ ಎಂದು ಭಾಸವಾಗುತ್ತದೆ. ಆದರೆ ಅದೇ ಹೊತ್ತಿನಲ್ಲಿ ಹೆಗಲ ಮೇಲೆ ಕುಳಿತಿದ್ದ ಯುವಕ ಕೈ ಚಾಚಿ ಗೋಡೆಯ ಮೇಲಿದ್ದ ಬಲ್ಬ್ ಅನ್ನು ಕ್ಷಣಮಾತ್ರದಲ್ಲಿ ಕಳವು ಮಾಡಿದ್ದಾನೆ. ಈ ಸಿಸಿಟಿವಿ ದೃಶ್ಯಗಳು ಈಗ ವೈರಲ್ ಆಗಿದ್ದು, ಆ ಪ್ರದೇಶದಲ್ಲಿ ಕಳ್ಳರು ಎಷ್ಟು ಕ್ರಿಯೇಟಿವ್ ಆಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಈ ಬಗ್ಗೆ ಕೆ.ಜಿ. ಹಳ್ಳಿ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದರೂ, ಇಂತಹ ಸಣ್ಣ ಪುಟ್ಟ ಕಳ್ಳತನಗಳು ನಿರಂತರವಾಗಿ ತಲೆನೋವಾಗಿ ಪರಿಣಮಿಸಿವೆ ಎಂದು ಸ್ಥಳೀಯ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿಗರೇ, ನಿಮ್ಮ ಮನೆ ಮತ್ತು ಕಚೇರಿಗಳ ಸುರಕ್ಷತೆಯ ಬಗ್ಗೆ ಹೆಚ್ಚು ಜಾಗರೂಕರಾಗಿರಿ. ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಹಾಗೂ ಅವು ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

Edited By : Vijay Kumar
PublicNext

PublicNext

05/04/2026 12:27 pm

Cinque Terre

9.14 K

Cinque Terre

4