ಮಂಗಳೂರು: ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಯುದ್ಧಗಳು ನಡೆಯುತ್ತಿರುವ ಪರಿಣಾಮವಾಗಿ ಎಲ್‌ಪಿಜಿ ಆಟೋ ಗ್ಯಾಸ್‌ಗಳಲ್ಲಿ ಏರಿಕೆ ಆಗುತ್ತಿದೆ. ಒಂದೊಂದು ಪಂಪ್‌ಗಳಲ್ಲಿ ಒಂದೊಂದು ದರವಿದೆ. ಹೀಗೆ ದರ ಏರಿಕೆಯಾದರೆ ಬಾಡಿಗೆ ದರವನ್ನು ಏರಿಸುವುದು ಅನಿವಾರ್ಯವಾಗಬಹುದು ಎಂದು ಪುತ್ತೂರು ತಾಲೂಕು ಆಟೋ ಚಾಲಕ ಮಾಲಕರ ಸಂಯುಕ್ತ ಹೋರಾಟ ಸಮಿತಿ ಅಧ್ಯಕ್ಷ ಜಯರಾಮ ಕುಲಾಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಎಲ್‌ಪಿಜಿ ಹಾಗೂ ಇತರ ಪಂಪ್‌ಗಳಲ್ಲಿ ನಿರಂತರವಾಗಿ ದರ ಹೆಚ್ಚಳ ಮಾಡುತ್ತಿದ್ದಾರೆ. ಬೇರೆ ಬೇರೆ ಪಂಪ್‌ಗಳಲ್ಲಿ ಬೇರೆ ಬೇರೆ ರೀತಿಯ ದರಗಳನ್ನು ಆಟೋ ಚಾಲಕರಲ್ಲಿ ಪಡೆಯುತ್ತಿದ್ದಾರೆ. ಆರಂಭದಲ್ಲಿ 62 ರೂಪಾಯಿಯಿದ್ದ ಗ್ಯಾಸ್‌ಗೆ ಈಗ ಕೆಲವೊಂದು ಪಂಪ್‌ಗಳಲ್ಲಿ ರೂ. 105ಕ್ಕೆ ಏರಿದೆ. ಆದರೆ ನಮಗೆ ಬಾಡಿಗೆ ದರ ಏರಿಕೆ ಮಾಡಲು ಪ್ರಾದೇಶಿಕ ಸಾರಿಗೆ ಇಲಾಖೆಯ ಅನುಮತಿ ಬೇಕಾಗಿದೆ. ಆದರೆ ಹೋಟೆಲ್‌ಗಳಲ್ಲಿ ಯಾವುದೇ ಮುಲಾಜಿಲ್ಲದೇ ದರ ಏರಿಕೆಯನ್ನು ಮಾಡಿದ್ದಾರೆ. ಇದರಿಂದಾಗಿ ರಿಕ್ಷಾ ಚಾಲಕರ ಬದುಕು ಸಂಕಷ್ಟಕ್ಕೆ ಈಡಾಗಿದೆ. ಹಾಗಾಗಿ ಎಲ್‌ಪಿಜಿ ಮತ್ತು ಇತರ ಎಲ್ಲಾ ಆಟೋ ಗ್ಯಾಸ್ ಪಂಪ್‌ಗಳಲ್ಲಿ ಏಕರೂಪ ದರ ನಿಗದಿಪಡಿಸಬೇಕು. ಸರ್ಕಾರದ ನಿಗದಿಪಡಿಸಿದ ಆಟೋ ಗ್ಯಾಸ್ ದರವನ್ನೇ ಅಳವಡಿಸಬೇಕು. ಇದರ ಜೊತೆಗೆ ರಿಕ್ಷಾಗಳಿಗೆ ಪೆಟ್ರೋಲ್ ಹಾಕಿಯಾದರೂ ಬಾಡಿಗೆ ಮಾಡುವ ಎಂದರೆ ಹಳೆ ಎಲ್‌ಪಿಜಿ ಆಟೋ ರಿಕ್ಷಾಗಳಿಗೆ ಪೆಟ್ರೋಲ್ ಹಾಕಿ ಓಡಿಸಲು ಸಾಧ್ಯವಿಲ್ಲ. ನಮ್ಮ ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿ ಮನವಿ ಮಾಡಿದ್ದೇವೆ ಎಂದರು.
PublicNext
05/04/2026 03:01 pm