ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೈಲ ಉಳಿತಾಯಕ್ಕೆ ನೇಪಾಳ ಸರ್ಕಾರದ ಮಾಸ್ಟರ್ ಪ್ಲಾನ್ - ಇನ್ಮುಂದೆ ವಾರಕ್ಕೆರಡು ದಿನ ರಜೆ!

ಕಾಠ್ಮಂಡು: ಪೆಟ್ರೋಲಿಯಂ ಉತ್ಪನ್ನಗಳ ತೀವ್ರ ಅಭಾವ ಹಾಗೂ ಗಗನಕ್ಕೇರುತ್ತಿರುವ ಇಂಧನ ಬೆಲೆಯಿಂದ ಕಂಗೆಟ್ಟಿರುವ ನೇಪಾಳ ಸರ್ಕಾರ, ಇಂಧನ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಇನ್ಮುಂದೆ ದೇಶಾದ್ಯಂತ ವಾರಕ್ಕೆ ಎರಡು ದಿನಗಳ ಕಾಲ ಸಾರ್ವಜನಿಕ ರಜೆ ಘೋಷಿಸಲು ಅಲ್ಲಿನ ಸಚಿವ ಸಂಪುಟ ತೀರ್ಮಾನಿಸಿದೆ.

​ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ ಮತ್ತು ದೇಶದಲ್ಲಿನ ಪೆಟ್ರೋಲಿಯಂ ಕೊರತೆಯನ್ನು ನೀಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಸಾರಿಗೆ ಸಂಚಾರವನ್ನು ಕಡಿಮೆ ಮಾಡುವ ಮೂಲಕ ಇಂಧನ ಬಳಕೆಯಲ್ಲಿ ಉಳಿತಾಯ ಮಾಡುವುದು ಸರ್ಕಾರದ ಮೂಲ ಉದ್ದೇಶ. ​ನೇಪಾಳ ಪ್ರಧಾನಮಂತ್ರಿ ಕಾರ್ಯಾಲಯ (PMO) ಈ ಹೊಸ ನಿಯಮದ ಕುರಿತು ಮಾಹಿತಿ ನೀಡಿದೆ.

​​ನೇಪಾಳವು ತನ್ನ ಇಂಧನ ಅಗತ್ಯಗಳಿಗಾಗಿ ಸಂಪೂರ್ಣವಾಗಿ ಆಮದಿನ ಮೇಲೆ ಅವಲಂಬಿತವಾಗಿದೆ. ಸದ್ಯದ ವಿದೇಶಿ ವಿನಿಮಯ ಮೀಸಲು ಉಳಿಸಿಕೊಳ್ಳಲು ಮತ್ತು ಇಂಧನ ಬಿಕ್ಕಟ್ಟನ್ನು ನಿಭಾಯಿಸಲು ಈ 'ವಾರಕ್ಕೆರಡು ದಿನ ರಜೆ' ನೀತಿಯು ಸಹಕಾರಿಯಾಗಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ​ಈ ನಿರ್ಧಾರದಿಂದಾಗಿ ಸರ್ಕಾರಿ ಕಚೇರಿಗಳು ಮತ್ತು ಶಿಕ್ಷಣ ಸಂಸ್ಥೆಗಳ ಕೆಲಸದ ಅವಧಿಯಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ.

Edited By : Nagaraj Tulugeri
PublicNext

PublicNext

05/04/2026 06:09 pm

Cinque Terre

10.39 K

Cinque Terre

1