ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : KCET ಮತ್ತು NEET ಕ್ರ್ಯಾಶ್ ಕೋರ್ಸ್‌ಗಳಿಗೆ ಹಂಚಿನಮನಿ ಇನ್‌ಸ್ಟಿಟ್ಯೂಟ್ಸ್‌ ನಲ್ಲಿ ಪ್ರವೇಶ ಪ್ರಾರಂಭ

ಧಾರವಾಡ : ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿದ್ಯಾರ್ಥಿಗಳನ್ನು ಸಮಗ್ರವಾಗಿ ತಯಾರು ಮಾಡುವ ಖ್ಯಾತ ಹಂಚಿನಮನಿ ಇನ್‌ಸ್ಟಿಟ್ಯೂಟ್ಸ್‌ನಲ್ಲಿ 2026ನೇ ಸಾಲಿನ KCET ಮತ್ತು NEET ಕ್ರ್ಯಾಶ್ ಕೋರ್ಸ್‌ಗಳಿಗೆ ಪ್ರವೇಶ ಪ್ರಾರಂಭವಾಗಿದೆ. ಸಂಸ್ಥೆಯ ಪ್ರಕಟಣೆ ಪ್ರಕಾರ, 2026ರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ವಿಶೇಷ ತರಬೇತಿ ಕೋರ್ಸ್‌ಗಳನ್ನು ರೂಪಿಸಲಾಗಿದೆ. KCET ಕ್ರ್ಯಾಶ್ ಕೋರ್ಸ್ 30 ದಿನಗಳ ಅವಧಿಯದ್ದಾಗಿದ್ದು, PU II ಪರೀಕ್ಷೆಗಳ ನಂತರ ಪ್ರಾರಂಭವಾಗಲಿದೆ.

NEET ಕ್ರ್ಯಾಶ್ ಕೋರ್ಸ್ 45 ದಿನಗಳ ಕಾಲ ನಡೆಯಲಿದ್ದು, ಇದೂ ಸಹ PU II ನಂತರ ಆರಂಭಗೊಳ್ಳಲಿದೆ. ಇನ್ನು NEET ಲಾಂಗ್ ಟೀಮ್ ಕೋರ್ಸ್ ಒಂದು ವರ್ಷದ ಅವಧಿಯದ್ದಾಗಿದ್ದು, NEET ಪರೀಕ್ಷೆಗಳ ನಂತರ ಆರಂಭವಾಗುತ್ತದೆ.ಸಂಸ್ಥೆಗೆ 30ಕ್ಕೂ ಹೆಚ್ಚು ವರ್ಷಗಳ ಶೈಕ್ಷಣಿಕ ಸಾಧನೆ ಇದ್ದು, 100ಕ್ಕೂ ಅಧಿಕ ಅನುಭವಸಂಪನ್ನ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರತಿವರ್ಷ 3000ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾತಿ ಪಡೆಯುತ್ತಿದ್ದು, 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೆಡಿಕಲ್ ಪ್ರವೇಶಕ್ಕೆ ಅರ್ಹರಾಗುತ್ತಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.ಕೋರ್ಸ್‌ಗಳ ವಿಶೇಷತೆಗಳಲ್ಲಿ ಮುದ್ರಿತ ಅಧ್ಯಯನ ಸಾಮಗ್ರಿ, ವಾರಾಂತರ ಪರೀಕ್ಷೆಗಳು, ಅಸೈನ್‌ಮೆಂಟ್‌ಗಳು, ಸಂಶಯ ನಿವಾರಣಾ ತರಗತಿಗಳು, ಸಹಾಯಕ ವಾಚನ ಸತ್ರಗಳು ಹಾಗೂ ಪೂರ್ಣ ಪ್ರಮಾಣದ ಮಾಕ್ ಟೆಸ್ಟ್‌ಗಳು ಒಳಗೊಂಡಿವೆ.ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕವಾಗಿ ಸುಸಜ್ಜಿತ ಹಾಸ್ಟೆಲ್ ಸೌಲಭ್ಯ ಹಾಗೂ 24 ಗಂಟೆಗಳ ಭದ್ರತಾ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.ಹೆಚ್ಚಿನ ಮಾಹಿತಿಗಾಗಿ 6364834497 ಮತ್ತು 6364834498 ಸಂಪರ್ಕಿಸಲು ಸಂಸ್ಥೆ ವಿನಂತಿಸಿದೆ.

ವಿದ್ಯಾರ್ಥಿಗಳು ತಮ್ಮ ವೈದ್ಯಕೀಯ ಕನಸುಗಳನ್ನು ನನಸು ಮಾಡಿಕೊಳ್ಳಲು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹಂಚಿನಮನಿ ಸಂಸ್ಥೆ ಮನವಿ ಮಾಡಿದೆ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

07/04/2026 03:59 pm

Cinque Terre

8.67 K

Cinque Terre

0

ಸಂಬಂಧಿತ ಸುದ್ದಿ