ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡವ ಶೈಲಿಯ ಸೀರೆಯಲ್ಲಿ ಮಿಂಚಿದ ರಶ್ಮಿಕಾ, ವಿರಾಜಪೇಟೆಯಲ್ಲಿ 'ವಿರೋಶ್' ಜೋಡಿಯ ಅದ್ಧೂರಿ ಪಾರ್ಟಿ

ಮಡಿಕೇರಿ: 'ನ್ಯಾಷನಲ್ ಕ್ರಷ್' ರಶ್ಮಿಕಾ ಮಂದಣ್ಣ ಅವರಿಗೆ ಈ ಬಾರಿಯ ಹುಟ್ಟುಹಬ್ಬ ಅತ್ಯಂತ ವಿಶೇಷವಾಗಿತ್ತು. ಏಪ್ರಿಲ್ 5ರಂದು ತಮ್ಮ 30ನೇ ವಸಂತಕ್ಕೆ ಕಾಲಿಟ್ಟ ಕೊಡಗಿನ ಬೆಡಗಿ, ಪತಿ ವಿಜಯ್ ದೇವರಕೊಂಡ ಜೊತೆಗೂಡಿ ತಮ್ಮ ತವರು ಮನೆಯಲ್ಲಿ ಅದ್ಧೂರಿಯಾಗಿ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ.

ಎರಡು ತಿಂಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ, ಮದುವೆಯ ನಂತರ ಮೊದಲ ಬಾರಿಗೆ ರಶ್ಮಿಕಾ ಅವರ ತವರು ಜಿಲ್ಲೆ ಕೊಡಗಿಗೆ ಭೇಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಂದಣ್ಣ ಕುಟುಂಬದ ವತಿಯಿಂದ ವಿರಾಜಪೇಟೆಯ 'ಸೆರೆನಿಟಿ ಕನ್ವೆನ್ಷನ್ ಹಾಲ್' ನಲ್ಲಿ ವಿಶೇಷ ಸ್ವಾಗತ ಸಮಾರಂಭ ಹಾಗೂ ಹುಟ್ಟುಹಬ್ಬದ ಪಾರ್ಟಿಯನ್ನು ಆಯೋಜಿಸಲಾಗಿತ್ತು.

ಸಾಂಪ್ರದಾಯಿಕ ಕೊಡವ ಶೈಲಿಯ ಸೀರೆ ಉಟ್ಟ ರಶ್ಮಿಕಾ ಈ ಸಮಾರಂಭದ ಪ್ರಮುಖ ಆಕರ್ಷಣೆಯಾಗಿದ್ರು. ಇನ್ನು ಪತ್ನಿ ರಶ್ಮಿಕಾಗೆ ಸಾಟಿಯಾಗುವಂತೆ ವಿಜಯ್ ದೇವರಕೊಂಡ ಅವರು ಕಪ್ಪು ಬಣ್ಣದ ಬ್ಲೇಜರ್, ಟ್ರೌಸರ್ ಹಾಗೂ ಬಿಳಿ ಶರ್ಟ್ ಧರಿಸಿ ಅತ್ಯಂತ ಕ್ಲಾಸಿಯಾಗಿ ಕಾಣಿಸಿಕೊಂಡರು. ವೇದಿಕೆಯತ್ತ ರಶ್ಮಿಕಾ ಮತ್ತು ವಿಜಯ್ ಕೈ ಕೈ ಹಿಡಿದು ಬಂದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಕಾರ್ಯಕ್ರಮದಲ್ಲಿ ಮಂದಣ್ಣ ಕುಟುಂಬದ ಆಪ್ತರು ಹಾಗೂ ಸ್ನೇಹಿತರು ಮಾತ್ರ ಭಾಗವಹಿಸಿ ಶುಭ ಹಾರೈಸಿದರು. ಒಟ್ಟಿನಲ್ಲಿ ಮದುವೆಯ ನಂತರದ ಮೊದಲ ಹುಟ್ಟುಹಬ್ಬವನ್ನು ರಶ್ಮಿಕಾ ಮಂದಣ್ಣ ಅವರು ತಮ್ಮ ನೆಚ್ಚಿನ ಕೊಡಗಿನ ಮಣ್ಣಿನಲ್ಲಿ, ಪ್ರೀತಿಯ ಪತಿ ಹಾಗೂ ಕುಟುಂಬದವರೊಂದಿಗೆ ಸಂಭ್ರಮದಿಂದ ಆಚರಿಸಿದ್ದಾರೆ.

Edited By : Vijay Kumar
PublicNext

PublicNext

07/04/2026 03:33 pm

Cinque Terre

16.98 K

Cinque Terre

0

ಸಂಬಂಧಿತ ಸುದ್ದಿ