ಕರ್ನಾಟಕದ ಜೀವನಾಡಿ ಎಂದೇ ಕರೆಯಲ್ಪಡುವ ಕೆಎಸ್‌ಆರ್‌ಟಿಸಿ ಬಸ್‌ಗಳು ಇಂದು ಕನಿಷ್ಠ ನಿರ್ವಹಣೆಯೂ ಇಲ್ಲದೇ ರಸ್ತೆಗಿಳಿಯುತ್ತಿವೆ. 'ಬ್ರ್ಯಾಂಡ್ ಕರ್ನಾಟಕ' ಎಂದು ಬೀಗುವ ಸರ್ಕಾರದ ಅಡಿಯಲ್ಲಿ ಸಾರಿಗೆ ಸಂಸ್ಥೆಯ ಬಸ್‌ಗಳು ಭೀಕರ ಸ್ಥಿತಿಗೆ ತಲುಪಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬಸ್ಸಿನ ಆಕ್ಸಿಲರೇಟರ್ ಅನ್ನು ಸರಿಪಡಿಸುವ ಬದಲು, ಹೀಗೆ ಅದಕ್ಕೆ ಬಟ್ಟೆಯ ಪಟ್ಟಿಯನ್ನು ಕಟ್ಟಿ ಅಟ್ಯಾಚ್ ಮಾಡಲಾಗಿದೆ. ಚಾಲಕರು ಇಂತಹ ಸ್ಥಿತಿಯಲ್ಲಿ ಬಸ್ ಚಲಾಯಿಸುವುದು ಎಷ್ಟು ಸುರಕ್ಷಿತ? ಚಾಲಕನ ಸೀಟು ಮುರಿದು ಹೋಗಿದ್ದು, ಅದನ್ನು ವೈರ್‌ಗಳ ಸಹಾಯದಿಂದ ಕಟ್ಟಿ ನಿಲ್ಲಿಸಲಾಗಿದೆ.
ಚಾಲಕನಿಗೆ ಸರಿಯಾದ ಆಸನವೇ ಇಲ್ಲದಿದ್ದರೆ ಅಪಘಾತ ಸಂಭವಿಸಿದರೆ ಹೊಣೆ ಯಾರು? ಬಸ್ಸಿನ ಟೈರ್ ಹತ್ತಿರ ಯಾವುದೋ ದ್ರವ ಸೋರಿಕೆಯಾಗುತ್ತಿದ್ದು, ಇದು ಬ್ರೇಕ್ ಫೇಲ್ ಅಥವಾ ಇಂಜಿನ್ ದೋಷದ ಮುನ್ಸೂಚನೆಯಂತೆ ಕಾಣುತ್ತಿದೆ. ದಿನನಿತ್ಯ ಸಾವಿರಾರು ಕಿಲೋಮೀಟರ್ ಸಂಚರಿಸುವ ಈ ಬಸ್‌ಗಳಲ್ಲಿ ಪ್ರಯಾಣಿಕರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಇದು ಕೇವಲ ಒಂದು ಬಸ್ಸಿನ ಕಥೆಯಲ್ಲ, ರಾಜ್ಯದ ಹಲವು ಡಿಪೋಗಳಲ್ಲಿನ ಬಸ್‌ಗಳ ಸ್ಥಿತಿ ಹೀಗೆಯೇ ಇದೆ. ಚಾಲಕರು ಅನಿವಾರ್ಯವಾಗಿ ಇಂತಹ ವಾಹನಗಳನ್ನು ರಸ್ತೆಗಿಳಿಸುತ್ತಿದ್ದಾರೆ. ದೊಡ್ಡ ದುರಂತ ಸಂಭವಿಸುವ ಮುನ್ನ ಸಾರಿಗೆ ಸಚಿವರು ಮತ್ತು ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ತಪಾಸಣೆ ನಡೆಸಬೇಕಿದೆ.
PublicNext
07/04/2026 02:40 pm
LOADING...