ಬೆಂಗಳೂರು : 90ರ ದಶಕದ ರೆಟ್ರೊ ಸ್ಪರ್ಶ ಹೊಂದಿರುವ ವಿಭಿನ್ನ ಕಥಾಹಂದರದ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ಈ ಚಿತ್ರ, ಇದೇ ಏಪ್ರಿಲ್ 17ರಂದು ತೆರೆಗೆ ಬರಲು ಸಜ್ಜಾಗಿದೆ.ಸುಜಯ್ ಶಾಸ್ತ್ರಿ ನಿರ್ದೇಶನದಲ್ಲಿ, ಗೋಕುಲ ಎಂಟರ್ಟೈನರ್ಸ್ ಬ್ಯಾನರ್ ಅಡಿಯಲ್ಲಿ ಗೋವಿಂದರಾಜು ನಿರ್ಮಿಸಿರುವ ಈ ಚಿತ್ರದಲ್ಲಿ, ಚಂದನ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಆನಂದ್ ಆಡಿಯೋ ಮೂಲಕ ಬಿಡುಗಡೆಯಾದ ಟ್ರೇಲರ್ ಭಾರೀ ಮೆಚ್ಚುಗೆ ಪಡೆದಿದ್ದು, ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ.
“ಒಳ್ಳೆಯ ಚಿತ್ರ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲವನ್ನೂ ಒದಗಿಸಿದ ನಮ್ಮ ನಿರ್ಮಾಪಕರಿಗೆ ಧನ್ಯವಾದಗಳು. ಒಂದು ರಿಯಾಲಿಟಿ ಶೋದಲ್ಲಿ ಚಂದನ್ ಶೆಟ್ಟಿಯನ್ನು ನೋಡಿದಾಗಲೇ, ನಮ್ಮ ಕಥೆಗೆ ಸೂಕ್ತ ನಾಯಕ ಇವರೇ ಅನ್ನಿಸಿತು. ರಾಜಗುರು ಹೊಸಕೋಟೆ ಬರೆದಿರುವ ಈ ಕಥೆ ಪ್ರತಿಯೊಬ್ಬರ ಮನಸ್ಸಿಗೂ ಹತ್ತಿರವಾಗುತ್ತದೆ. ಚಂದನ್ ತುಂಬಾ ಶ್ರಮಪಟ್ಟಿದ್ದಾರೆ. ನಮ್ಮ ತಂಡದ ಪ್ರತಿಯೊಬ್ಬರೂ ಅದ್ಭುತವಾಗಿ ಕೆಲಸ ಮಾಡಿದ್ದಾರೆ. ಏಪ್ರಿಲ್ 17ರಂದು ನಮ್ಮ ಚಿತ್ರವನ್ನು ನೋಡಿ ಬೆಂಬಲಿಸಿ.”
“ಈ ಕಥೆಯೇ ನನ್ನನ್ನು ಈ ಚಿತ್ರಕ್ಕೆ ಸೆಳೆದಿತು. ನಾಯಕನಾಗಿ ಇದು ನನ್ನ ಮೊದಲ ಸಿನಿಮಾ. ಸುಜಯ್ ಶಾಸ್ತ್ರಿ ಮತ್ತು ರಾಜಗುರು ಹೊಸಕೋಟೆ ಅವರು ನನಗೆ ಒಂದು ಶಾಲೆಯಂತಿದ್ದರು – ಅವರಿಂದ ನಾನು ಬಹಳ ಕಲಿತಿದ್ದೇನೆ. ಟ್ರೇಲರ್‌ಗೆ ಸಿಕ್ಕ ಪ್ರತಿಕ್ರಿಯೆ ಅತಿಯಾದ ಸಂತೋಷ ನೀಡಿದೆ. ಕುಟುಂಬ ಸಮೇತವಾಗಿ ನೋಡಬಹುದಾದ ಚಿತ್ರ ಇದಾಗಿದೆ. ಕನ್ನಡಿಗರಿಂದ ಕನ್ನಡಿಗರಿಗಾಗಿಯೇ ಮಾಡಿರುವ ಈ ಚಿತ್ರವನ್ನು ಚಿತ್ರಮಂದಿರಗಳಲ್ಲೇ ನೋಡಿ ಬೆಂಬಲಿಸಿ.”
“‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಚಿತ್ರ ನೋಡಿದ ನಂತರ ಸುಜಯ್ ಶಾಸ್ತ್ರಿ ಅವರ ಜೊತೆ ಕೆಲಸ ಮಾಡುವ ಆಸೆ ಹುಟ್ಟಿತು. ರಾಜಗುರು ಹೇಳಿದ ಕಥೆ ನನಗೆ ತುಂಬಾ ಇಷ್ಟವಾಯಿತು. ಅದರಿಂದಲೇ ಈ ಚಿತ್ರ ಹುಟ್ಟಿಕೊಂಡಿತು. ಕೆ.ವಿ.ಎನ್ ಸಂಸ್ಥೆ ಚಿತ್ರದ ವಿತರಣೆ ಮಾಡುತ್ತಿದೆ. ಏಪ್ರಿಲ್ 17ರಂದು ನಿಮ್ಮ ಮುಂದೆ ಬರುತ್ತಿದ್ದೇವೆ.” ಕಥೆಗಾರ ರಾಜಗುರು ಹೊಸಕೋಟೆ, “ಇದು ಕಾಲದ ಮಹತ್ವವನ್ನು ಸಾರುವ ಕಥೆ” ಎಂದರು.
ನಾಯಕಿ ಅರ್ಚನಾ ಕೊಟ್ಟಿಗೆ ತಮ್ಮ ಪಾತ್ರದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.ಮಂಜು ಪಾವಗಡ, ಮಾಹಂತೇಶ್, ಅನಂತ ಪದ್ಮನಾಭ ಹಾಗೂ ಸಂಗೀತ ನಿರ್ದೇಶಕ ಪ್ರದೀಪ್ ಕೂಡ ಚಿತ್ರದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.
PublicNext
07/04/2026 04:51 pm