ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ರೇಯಸ್ ಮಂಜು ಬರ್ತ್‌ಡೇಗೆ “ದಿಲ್‌ದಾರ್” ಟೀಸರ್ ಗಿಫ್ಟ್..!

ಬೆಂಗಳೂರು : ನಟ ಶ್ರೇಯಸ್ ಮಂಜು ಅವರಿಗೆ ಹುಟ್ಟುಹಬ್ಬದ ಸಂಭ್ರಮದ ನಿಮಿತ್ತ “ದಿಲ್‌ದಾರ್” ಚಿತ್ರದ ತಂಡ ವಿಶೇಷ ಉಡುಗೊರೆಯನ್ನು ನೀಡಿದೆ. ಬರ್ತ್‌ಡೇ ಟೀಸರ್ ಬಿಡುಗಡೆಯಾಗಿ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ಟೀಸರ್‌ನಲ್ಲಿ ಶ್ರೇಯಸ್ ಮಂಜು ಮತ್ತೊಂದು ಮಟ್ಟದ ಆಕ್ಷನ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಪಡ್ಡೆಹುಲಿ ಚಿತ್ರದ ನಂತರ ಮತ್ತೆ ಖಡಕ್ ಅವತಾರದಲ್ಲಿ ಮಿಂಚಿದ್ದಾರೆ.ಮಧು ಗೌಡ ಗಂಗೂರ್ ನಿರ್ದೇಶನದ ಈ ಚಿತ್ರ ಬಹುತೇಕ ಕೆಲಸಗಳನ್ನು ಮುಗಿಸಿಕೊಂಡಿದ್ದು, ಬಿಡುಗಡೆಯ ಸನ್ನಾಹದಲ್ಲಿದೆ. ಹೊಸ ತಲೆಮಾರಿಗೆ ಹೊಂದುವ ಕಥೆಯೊಂದಿಗೆ ಸಿನಿಮಾ ಮೂಡಿ ಬಂದಿದೆ ಎನ್ನಲಾಗಿದೆ.

ಚಿತ್ರವನ್ನು ಡಾ. ಆರ್ ಸಂತೋಷ್ ಕುಮಾರ್ ನಿರ್ಮಿಸಿದ್ದು, ಕೀರ್ತಿ ಕೃಷ್ಣ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲೇ ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾಗಲಿದೆ.

Edited By : Manjunath H D
PublicNext

PublicNext

06/04/2026 06:53 pm

Cinque Terre

15.03 K

Cinque Terre

0