ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಹುಟ್ಟುಹಬ್ಬದ ದಿನವೇ ಶ್ರೇಯಸ್ ಮಂಜುಗೆ ಡಬಲ್ ಧಮಾಕಾ..!

ಬೆಂಗಳೂರು : ನಟ ಶ್ರೇಯಸ್ ಮಂಜು ಅವರಿಗೆ ಈ ಬಾರಿ ಹುಟ್ಟುಹಬ್ಬದ ಸಂಭ್ರಮ ಇನ್ನಷ್ಟು ವಿಶೇಷವಾಗಿದೆ. “ದಿಲ್‌ದಾರ್” ಚಿತ್ರತಂಡದಿಂದ ಬರ್ತ್‌ಡೇ ಗಿಫ್ಟ್ ಆಗಿ ಟೀಸರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ.

ಟೀಸರ್‌ನಲ್ಲಿ ಶ್ರೇಯಸ್ ಮಂಜು ಭರ್ಜರಿ ಆಕ್ಷನ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಅವರ ಮಾಸ್ ಸ್ಟೈಲ್ ಮತ್ತೊಮ್ಮೆ ಹೈಲೈಟ್ ಆಗಿದೆ. ಪಡ್ಡೆಹುಲಿ ಚಿತ್ರದ ಬಳಿಕ ಮತ್ತೆ ಶ್ರೇಯಸ್ ಖಡಕ್ ಅವತಾರದಲ್ಲಿ ಮಿಂಚಿದ್ದು, ಫ್ಯಾನ್ಸ್‌ಗಳಿಗೆ ಇದು ಡಬಲ್ ಟ್ರೀಟ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಮಧು ಗೌಡ ಗಂಗೂರ್ ನಿರ್ದೇಶನದ “ದಿಲ್‌ದಾರ್” ಸಿನಿಮಾ ಈಗಾಗಲೇ ಶೂಟಿಂಗ್ ಮತ್ತು ಬಹುತೇಕ ತಾಂತ್ರಿಕ ಕೆಲಸಗಳನ್ನು ಮುಗಿಸಿಕೊಂಡಿದ್ದು, ಬಿಡುಗಡೆಗೆ ಸಜ್ಜಾಗಿದೆ. ಹೊಸ ತಲೆಮಾರಿಗೆ ಹತ್ತಿರವಾಗುವಂತಹ ಕಥೆ ಹೊಂದಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ.

ಈ ಚಿತ್ರವನ್ನು ಡಾ. ಆರ್ ಸಂತೋಷ್ ಕುಮಾರ್ ಅದ್ದೂರಿಯಾಗಿ ನಿರ್ಮಿಸಿದ್ದು, ಕೀರ್ತಿ ಕೃಷ್ಣ ಈ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಜೊತೆಗೆ ಸಾಧು ಕೋಕಿಲಾ ಸೇರಿದಂತೆ ಹಲವು ಹಾಸ್ಯ ಕಲಾವಿದರು ಹಾಗೂ ಖಳ ನಟರು ಸಿನಿಮಾಗೆ ಇನ್ನಷ್ಟು ರಂಗ ತುಂಬಿದ್ದಾರೆ.ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಚಿತ್ರದ ಬಿಡುಗಡೆಯ ದಿನಾಂಕ ಪ್ರಕಟವಾಗುವ ನಿರೀಕ್ಷೆಯಿದೆ.

Edited By :
PublicNext

PublicNext

06/04/2026 02:02 pm

Cinque Terre

18.86 K

Cinque Terre

0