ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣ್ತಾ ಇದೆ ನಾನು ಕರುಣಾಕರ ಸಿನಿಮಾ..!

ಬೆಂಗಳೂರು: “ನಾನು ಕರುಣಾಕರ” ಸಿನಿಮಾ ಬಿಡುಗಡೆಯಾದ ನಂತರ ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣ್ತಾ ಇದೆ. ಸಿನಿಪ್ರೇಕ್ಷಕರು ಚಿತ್ರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಥಿಯೇಟರ್‌ಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ನಮ್ ಪಾಪ್ ಕಾರ್ನ್ ಸಿನಿಮಾ ಬ್ಯಾನರ್ ಅಡಿಯಲ್ಲಿ ಮೂಡಿಬಂದ ಈ ಚಿತ್ರಕ್ಕೆ ಆರ್ಯನ್ ತೇಜಸ್ ನಿರ್ದೇಶನ ಮಾಡಿದ್ದು, ತಾವೇ ನಾಯಕನಾಗಿ ಮಿಂಚಿದ್ದಾರೆ.

ಜೊತೆಗೆ ರಾಧ ಭಗವತಿ ಅವರ ಅಭಿನಯವೂ ಪ್ರೇಕ್ಷಕರ ಮನಗೆದ್ದಿದೆ. ಚಿತ್ರದ ಕಥೆ ನೈಜತೆಗೆ ಹತ್ತಿರವಾಗಿದ್ದು, ಭಾವನಾತ್ಮಕ ಕ್ಷಣಗಳು ಮತ್ತು ವಿಭಿನ್ನ ನಿರೂಪಣಾ ಶೈಲಿ ಜನರನ್ನು ಸೆಳೆಯುತ್ತಿದೆ. ಸಿನಿಮಾ ನೋಡಿದವರು ಪಾಸಿಟಿವ್ ಟಾಕ್ ನೀಡುತ್ತಿರುವುದರಿಂದ ದಿನದಿಂದ ದಿನಕ್ಕೆ ಕ್ರೇಜ್ ಹೆಚ್ಚಾಗುತ್ತಿದೆ. “ನಾನು ಕರುಣಾಕರ” ಕೇವಲ ಮನರಂಜನೆ ಅಲ್ಲ, ಬದುಕಿನ ಅರ್ಥ ಹೇಳುವ ಚಿತ್ರ ಎಂದು ಅಭಿಪ್ರಾಯಗಳು ಕೇಳಿಬರುತ್ತಿವೆ. ಒಟ್ಟಾರೆ, ಈ ಸಿನಿಮಾ ಈಗ ಥಿಯೇಟರ್‌ಗಳಲ್ಲಿ ಹೌಸ್‌ಫುಲ್ ಪ್ರದರ್ಶನದೊಂದಿಗೆ ಸಕ್ಸಸ್ ಪಥದಲ್ಲಿ ಸಾಗುತ್ತಿದೆ.

Edited By : Nirmala Aralikatti
PublicNext

PublicNext

06/04/2026 02:36 pm

Cinque Terre

37.04 K

Cinque Terre

0