ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ: ಆರೋಗ್ಯಕರ ಖಡಕ್ ರೊಟ್ಟಿಗೆ ವಿದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ - ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮೂಲಕ ಕಲಬುರಗಿ ರೊಟ್ಟಿಯ ಮಹತ್ವವನ್ನು ಸಾರಿದ್ದಾರೆ. ತನ್ನ ವಿಶಿಷ್ಟ ಗುಣಮಟ್ಟ, ರುಚಿ ಹಾಗೂ ಪೌಷ್ಟಿಕಾಂಶದಿಂದಾಗಿ ಜಿಐ ಟ್ಯಾಗ್ ಪಡೆದಿರುವ ಕಲಬುರಗಿ ರೊಟ್ಟಿ, ಜಾಗತಿಕ ಮಟ್ಟದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಗಳಿಸಿಕೊಂಡಿದೆ.

ಕಲಬುರಗಿ ರೊಟ್ಟಿಗೆ ವ್ಯವಸ್ಥಿತ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಆನ್‌ಲೈನ್ ಮಾರುಕಟ್ಟೆ ಮತ್ತು ಪ್ರಚಾರ ವ್ಯವಸ್ಥೆಗಳಂತಹ ಉಪಕ್ರಮಗಳಿಂದಾಗಿ, ಕಲಬುರಗಿ ರೊಟ್ಟಿಗಳ ಮಹತ್ವದ ಅರಿವು ಮತ್ತು ಮಾರುಕಟ್ಟೆಯನ್ನು ವಿದೇಶಗಳವರೆಗೂ ವಿಸ್ತರಿಸಲಾಗುತ್ತಿದೆ.

ಕಲಬುರಗಿ ಮೂಲದವರೇ ಸ್ಥಾಪಿಸಿರುವ ಅಸ್ಥಮ್ ಎಕ್ಸ್ಪೋರ್ಟ್ಸ್ ಅಂಡ್ ಇಂಪೋರ್ಟ್ಸ್ ಕಂಪನಿಯು ಅತ್ಯಂತ ಆಸಕ್ತಿಯೊಂದಿಗೆ ಕಲಬುರಗಿ ರೊಟ್ಟಿಗಳನ್ನು ಅಮೆರಿಕಾದ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದ್ದು, ಈಗಾಗಲೇ ರೊಟ್ಟಿಯ ಗುಣಮಟ್ಟವನ್ನು ಪರೀಕ್ಷಿಸಿ ತಜ್ಞರು ಒಪ್ಪಿಗೆ ಸೂಚಿಸಿದ್ದಾರೆ. ಈ ಮಹತ್ವದ ಬೆಳವಣಿಗೆಯು ಕಲಬುರಗಿ ರೊಟ್ಟಿಗೆ ಅಮೆರಿಕಾದಲ್ಲಿ ಹೊಸ ಮಾರುಕಟ್ಟೆ ತೆರೆಯಲು ಹಾದಿ ಸುಗಮಗೊಳಿಸಿದೆ.

ಕಲಬುರಗಿ ರೊಟ್ಟಿಯ ಈ ಮಾರುಕಟ್ಟೆ ವಿಸ್ತರಣೆಯು ಜಿಲ್ಲೆಯಲ್ಲಿನ ಉದ್ಯಮಶೀಲತೆಗೆ ದೊಡ್ಡ ಪ್ರೋತ್ಸಾಹ ನೀಡಲಿದೆ. ಅದರಲ್ಲೂ ವಿಶೇಷವಾಗಿ, ಮಹಿಳಾ ಸ್ವಸಹಾಯ ಸಂಘಗಳಲ್ಲಿನ ಮಹಿಳೆಯರ ಬದುಕಿನಲ್ಲಿ ಇದು ಮಹತ್ತರ ಬದಲಾವಣೆಗೆ ಕಾರಣವಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Edited By :
PublicNext

PublicNext

19/04/2026 12:38 pm

Cinque Terre

8.45 K

Cinque Terre

1