ಕಲಬುರಗಿ: ರಾತ್ರಿ ಹಾಗೂ ಹಗಲು ಸೇರಿ ಬಿಂದಾಸ್ ಆಗಿ ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದು. ಸೇಡಂ ತಾಲ್ಲೂಕಿನ ತೆಲ್ಕೂರು, ಹಾಬಾಳ ಸೇರಿ ಹಲವು ಗ್ರಾಮಗಳ ಮುಖಾಂತರ ಹರಿದು ಹೋಗುವ ಕಾಗಿಣಾ ನದಿಯು ಅಕ್ರಮ ಮರಳುಗಾರರಿಗೆ ಸ್ವರ್ಗಕ್ಕೆ ಸಮಾನವಾಗಿದೆ.
ಪ್ರತಿನಿತ್ಯವೂ20 ರಿಂದ 30 ಟ್ರ್ಯಾಕ್ಟರ್ ಗಳ ಮುಖಾಂತರ ಮರಳು ಸಾಗಾಟ ಮಾಡುತ್ತಿದ್ದು, ರಾತ್ರಿ ಆದರೆ ಸಾಕು ಮರಳು ದಂಧೆಕೋರರು ಆಕ್ಟಿವ್ ಆಗುತ್ತಾರೆ
ಮರಳು ಸಾಗಾಟದ ವಿಡಿಯೋ ಜನರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದು.ಸೇಡಂ ಹಾಗೂ ಸುಲೆಪೇಟ್ ಮಾರ್ಗವಾಗಿ ತೆಲಂಗಾಣಕ್ಕೆ ಸಪ್ಲೈ ಆಗುತ್ತಿದೆ.
ಸುಲೆಪೇಟ್ ಪೊಲೀಸ್ ಠಾಣೆಯ ಮುಂದೆಯೇ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಹೋಗುತ್ತಿದ್ದು, ಅಕ್ರಮಕ್ಕೆ ಪೊಲೀಸರೇ ಸಾಥ್ ನೀಡಿದ್ರಾ ಎನ್ನುವ ಅನುಮಾನ ಹುಟ್ಟು ಹಾಕಿದೆ. ಇದಕ್ಕೆ ಕಡಿವಾಣ ಯಾವಾಗ ಸಂಬಂಧಿಸಿದ ಇಲಾಖೆಯವರು ಕ್ರಮ ಕೈಗೊಳ್ಳಬೇಕೆಂದು ಜನರು ಒತ್ತಾಯಿಸಿದ್ದಾರೆ.
PublicNext
23/04/2026 01:17 pm
LOADING...