ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಾಣಿ-ಪಕ್ಷಿಗಳಿಗಾಗಿ ನೀರಿನ ದಾಹ ತಿರಿಸುತ್ತಿರುವ ಮನುಷ್ಯರು

ಗದಗ : ದಿನದಿಂದ ದಿನಕ್ಕೆ ಕಾದು ಕೆಂಡವಾಗುತ್ತಿರುವ ಬಿಸಿಲಿನ ತಾಪಮಾನಕ್ಕೆ ಮಾನವ ಸಹಿತ ಪ್ರಾಣಿಗಳು ಸಹ ಬಿಸಿಲಿನ ಬೇಗೆಯಿಂದ ಬಸವಳಿದು ತತ್ತರಿಸುತ್ತಿರುವಾಗ ಪ್ರಾಣಿ ಪಕ್ಷಿಗಳ ಯಾವ ಲೆಕ್ಕ ಹೇಳಿ..? ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣ ಪ್ರದೇಶದ ವ್ಯಾಪ್ತಿಯಲ್ಲಿ ಎಲ್ಲಿಯೂ ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರಿಲ್ಲದ್ದರಿಂದ ಅವು ಮೂಕ ವೇದನೆ ಅನುಭವಿಸುತ್ತಿವೆ.

ಸದಾ ಗಿಡ ಮರಗಳಲ್ಲಿ ವಾಸಿಸುವ ಮಂಗಗಳು ನೀರಿನ ದಾಹಕ್ಕಾಗಿ ಯಾವುದೇ ಹೆದರಿಕೆಯಿಲ್ಲದೆ ಮನುಷ್ಯರ ಮುಂದೆ ನೀರಿಗಾಗಿ ಅಂಗಲಾಚುವ ಮನ ಕುಲುಕುವ ದೃಶ್ಯ ಕಂಡು ಬಂದಿತ್ತು. ಶಿಗ್ಲಿ ನಾಕಾದಲ್ಲಿರುವ ಜೆರಾಕ್ಸ್ ಅಂಗಡಿಯ ಮೇಲ್ಭಾಗದಲ್ಲಿ ಮಂಜುನಾಥ ದೊಡ್ಡಗೌಡರ ಊಟ ಮಾಡಿ ಕೈ ತೊಳೆದುಕೊಳ್ಳುತ್ತಿದ್ದರು. ಕಿಟಕಿಯ ಮುಂಭಾಗದಲ್ಲಿ ಕುಳಿತಿದ್ದ ಮಂಗಗಳ ಹಿಂಡು ಕೈ ತೊಳೆದುಕೊಳ್ಳುತ್ತದೆ ವ್ಯಕ್ತಿಗೆ ನೀರು ಕುಡಿಸುವಂತೆ ಮರಿಯೊಂದು ಕಿಟಕಿಯ ಮೇಲೆ ಏರಿ ಕುಳಿತುಕೊಂಡಿತು ಆಗ ಒಂದು ಲೋಟದಲ್ಲಿ ನೀರನ್ನು ತುಂಬಿ ಮಂಗಗಳಿಗೆ ನೀರನ್ನು ಕುಡಿಸಿ ಅವುಗಳ ದಾಹವನ್ನು ಹಿಂಗಿಸಿದರು.

ಶಿಗ್ಲಿ ನಾಕಾದಲ್ಲಿ ಮಂಗಗಳು ಮಾನವರೊಂದಿಗೆ ಸಂಪರ್ಕ ಬಂದಿತು ಯಾರಾದರೂ ಬಿಸ್ಕಿಟುಗಳನ್ನು ನೀಡಿದರೆ ಕೆಂಪು ಕೋತಿಗಳಂತೆ ಕಪ್ಪು ಮುಖದ ಮಂಗಗಳು ಸಹ ಅತ್ಯಂತ ಸುಲಭವಾಗಿ ಬೆರೆಯುತ್ತಿವೆ.ಪಟ್ಟಣದ ಶಿಗ್ಲಿ ಕ್ರಾಸ್ ಹಾವಳಿ ಹನುಮಂತರ ದೇವಸ್ಥಾನ ಗದಗಿನ ನಾಕಾ ಸೇರಿದಂತೆ ಇನ್ನೂ ಅನೇಕ ಕಡೆಗಳಲ್ಲಿ ಮಂಗಗಳು ಕಂಡು ಬರುತ್ತಿದ್ದು ಪ್ರಾಣಿ ಪಕ್ಷಿಗಳ ಮೇಲೆ ತುಸು ಪ್ರೀತಿ ಇರುವವರು ನೀರು ಬಟ್ಟಲಲ್ಲಿ ಇಟ್ಟು ಬ್ರೆಡ್ ಇನ್ನೂ ಅನೇಕ ರೀತಿಯ ತಿನಿಸುಗಳನ್ನು ನೀಡುತ್ತಿರುವುದು ಮಾನವ ಕುಲಕ್ಕೆ ಮಾನವೀಯತೆ ಮೆರೆಯುತ್ತಿದ್ದಾರೆ.

ಇನ್ನೂ ದಿನದಿಂದ ದಿನಕ್ಕೆ 40% ಯಿಂದ 45% ತಾಪಮಾನ ಏರುತ್ತಿರುವುದರಿಂದ ಪಟ್ಟಣದ ಕೆಲವು ಮನೆಯ ಮುಂದೆ ನೀರಿನ ಬಟ್ಟಲು ಪಕ್ಷಿಗಳಿಗೆ ಮೀಸಲು ಇಡುತ್ತಿದ್ದಾರೆ ಇನ್ನೂ ಕೆಲವೊಂದು ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಣಿ ಪಕ್ಷಿಗಳಿಗಾಗಿ ದೊಡ್ಡ ದೊಡ್ಡ ಪಾತ್ರೆಗಳನ್ನು ನೀರು ತುಂಬಿ ಇಡುತ್ತಿರುವ ದೃಶ್ಯಗಳು ಸರ್ವೇ ಸಾಮಾನ್ಯವಾಗಿದೆ.ಸುರೇಶ ಎಸ್ ಲಮಾಣಿ ಪಬ್ಲಿಕ್ ನೆಕ್ಸ್ಟ್ ಗದಗ

Edited By : PublicNext Desk
Kshetra Samachara

Kshetra Samachara

20/04/2026 04:55 pm

Cinque Terre

4.48 K

Cinque Terre

0