ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ಮಾಸಾಸನ ಫಲಾನುಭವಿ ಸಾಬವ್ವರಿಗೆ ವಾತ್ಸಲ್ಯ ಮನೆ ಹಸ್ತಾಂತರ

ಯಾದಗಿರಿ: ಜಿಲ್ಲೆಯ ಬಂದಳ್ಳಿ ವಲಯದ ಮಾಸಾಸನ ಫಲಾನುಭವಿ ಸಾಬವ್ವ ಅವರಿಗೆ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮ ನೆರವೇರಿತು.

ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಗುರುಮಿಟಕಲ್ ಮತಕ್ಷೇತ್ರದ ಶಾಸಕ ಶರಣಗೌಡ ಕಂದಕೂರು ವಾತ್ಸಲ್ಯ ಮನೆ ಹಸ್ತಾಂತರಿಸಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಡವರ, ಅಸಹಾಯಕರ, ಸೌಲಭ್ಯ ವಂಚಿತ ವರ್ಗದವರನ್ನು ಗುರುತಿಸಿ ಅವರ ಜೀವನಕ್ಕೆ ಅನುಕೂಲ ಆಗುವಂತಹ ಕರ್ತವ್ಯವನ್ನು ನಿರ್ವಹಿಸುತ್ತಿದೆ ಎಂದು ಫಲಾನುಭವಿಗೆ ಶುಭ ಹಾರೈಸಿದರು.

ಈ ಸಂದರ್ಭ ಯಾದಗಿರಿ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷ ಹನುಮಂತ ಹಕ್ಕಿ, ಗ್ರಾಮದ ಮುಖಂಡರಾದ ಅಂಬರೀಷ್ ಗೌಡ ಮಲಿಪಾಟೀಲ್, ಯೋಜನಾಧಿಕಾರಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಕು. ಲಕ್ಷ್ಮಿ, ಊರಿನ ಗಣ್ಯರು ಉಪಸ್ಥಿತರಿದ್ದರು.

Edited By : Nagaraj Tulugeri
PublicNext

PublicNext

21/04/2026 09:07 am

Cinque Terre

14.12 K

Cinque Terre

0