ಯಾದಗಿರಿ: ಫಾಸ್ಟ್ ಫುಡ್, ಬೇಕರಿ ಪದಾರ್ಥಗಳು ಹಾಗೂ ಜ್ಯೂಸ್ ಬಾಟಲ್ ಗಳಲ್ಲಿ ಕೆಮಿಕಲ್ ಕಲರ್ ಬಳಸುತ್ತಿದ್ದ ಬಗ್ಗೆ ಆರೋಪ ಹಿನ್ನೆಲೆಯಲ್ಲಿ ಯಾದಗಿರಿ ನಗರದಾದ್ಯಂತ ಬರುವ ಬೇಕರಿ, ಫಾಸ್ಟ್ ಫುಡ್ ಮಳಿಗೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ವ್ಯಾಪಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಸಹಾಯಕ ಆಯುಕ್ತ ಶ್ರೀಧರ್ ನೇತೃತ್ವದ ತಂಡದಿಂದ ನಡೆದ ದಾಳಿ ವೇಳೆ ಹಲವು ಮಳಿಗೆಗಳಲ್ಲಿ ಕೆಮಿಕಲ್ ಕಲರ್ ಬಳಸುತ್ತಿರೋದು ಕಂಡು ಬಂದಿದ್ದು, ವ್ಯಾಪಾರಸ್ಥರಿಗೆ ದಂಡ ಹಾಕಿ ಮುಂದಿನದಿನಗಳಲ್ಲಿ ಕೆಮಿಕಲ್ ಕಲರ್ ಬಳಸದಂತೆ ಅಧಿಕಾರಿಗಳು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
PublicNext
20/04/2026 12:08 pm
LOADING...