ಯಾದಗಿರಿ :- ಮದುವೆಯಾದ 15 ದಿನದಲ್ಲೇ ಮದುಮಗ ಓರ್ವ ಈಜಲು ಹೋಗಿ ಸಾವನ್ನಪ್ಪಿರುವ ದಾರುಣ ಘಟನೆ ಯಾದಗಿರಿ ಜಿಲ್ಲೆಯ ವಡಿಗೇರಾ ತಾ. ಗೊಂದೆನೂರು ಗ್ರಾಮದಲ್ಲಿ ಘಟನೆ ನಡೆದಿದೆ.
ಭೀಮರಾಯ ಮ್ಯಾಗೇರಿ ಎಂಬಾತನೇ ದುರಂತ ಅಂತ್ಯ ಕಂಡ ಮೃತ ದುರ್ದೈವಿಯಾಗಿದ್ದಾನೆ.
ಗ್ರಾಮದ ಹೊರ ವಲಯದಲ್ಲಿರುವ ಹೊಂಡದಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದಾನೆ. ಸಂಭ್ರಮದಿಂದ ಇರಬೇಕಾದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಭೀಮರಾಯ ಅಗಲಿಕೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೂ ಈ ಘಟನೆ ವಡಿಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..
PublicNext
28/04/2026 10:36 pm
LOADING...