ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆದಿ ಬಸವೇಶ್ವರ ಜಾತ್ರಾ ವೈಭವ- ಭಕ್ತಿ ಸಾಗರದಲ್ಲಿ ತೇರು ಸಂಭ್ರಮ!

ರಾಯಚೂರು: ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ಹೊರವಲಯದಲ್ಲಿರುವ ಶ್ರೀ ಆದಿ ಬಸವೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವವು ಸಡಗರ ಸಂಭ್ರಮದಿಂದ ಅದ್ಧೂರಿಯಾಗಿ ಜರುಗಿತು. ಪ್ರತಿ ವರ್ಷದಂತೆ ಈ ವರ್ಷವೂ ಬೆಳಿಗ್ಗೆಯಿಂದ ಆರಂಭವಾದ ಜಾತ್ರಾ ಕಾರ್ಯಕ್ರಮಗಳು ಸಂಜೆ ರಥೋತ್ಸವದೊಂದಿಗೆ (ತೇರು) ಸಂಪನ್ನಗೊಂಡವು.

ಸಾಮೂಹಿಕ ವಿವಾಹದ ಸಂಭ್ರಮ

ಈ ಬಾರಿಯ ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿ ದೇವಸ್ಥಾನದ ಆವರಣದಲ್ಲಿ ಸಾಮೂಹಿಕ ವಿವಾಹ ಸಮಾರಂಭವನ್ನು ಆಯೋಜಿಸಲಾಗಿತ್ತು. ಮಲದಗುಡ್ಡದ ಶ್ರೀಗಳು, ಇರಕಲ್ ಮಠದ ಶ್ರೀಗಳು ಹಾಗೂ ಹುನಕುಂಟಿ ಶ್ರೀಗಳ ಆಶೀರ್ವಾದದೊಂದಿಗೆ ಒಟ್ಟು 25 ನವಜೋಡಿಗಳು ಶ್ರೀ ಆದಿ ಬಸವೇಶ್ವರ ದೇವರ ಸನ್ನಿಧಿಯಲ್ಲಿ ನವಜೀವನಕ್ಕೆ ಕಾಲಿಟ್ಟರು.

Edited By : Vinayak Patil
Kshetra Samachara

Kshetra Samachara

22/04/2026 08:27 am

Cinque Terre

1.78 K

Cinque Terre

0