ಬಾಗಲಕೋಟೆ: ಜಿಲ್ಲೆಯ ಕಮತಗಿ ಪಟ್ಟಣದ ದೇವರದಾಸಿಮಯ್ಯ ಸಂಪ್ರದಾಯದ ಹಟಗಾರ ಸಮುದಾಯದಿಂದ ದೇವರದಾಸಿಮಯ್ಯ ಮೂರ್ತಿ ಅದ್ದೂರಿ ಮೆರವಣಿಗೆ ಜರುಗಿತು.
ಮೆರವಣಿಗೆಯು ಪಟ್ಟಣದ ಹುಚ್ಚೇಶ್ವರ ದೇವಸ್ಥಾನದಿಂದ ಆರಂಭವಾಗಿ ಪ್ರಮುಖ ಬೀದಿಗಳಲ್ಲಿ ಜರುಗಿತು.
ಮೆರವಣಿಗೆಯಲ್ಲಿ ನೂರಾರು ಮುತ್ತೈದೆಯರು ಕುಂಭಹೊತ್ತು ಸಾಗುವುದು ಸಾಂಪ್ರದಾಯಿಕ ಸಂಭ್ರಮಕ್ಕೆ ಸಾಕ್ಷಿಯಾಯಿತು.
ಕರಡಿ ಮಜಲು, ಶಹನಾಯಿ, ಹಲಗೆ, ತಾಳ, ಧ್ವನಿವರ್ಧಕಗಳು ರಂಗು ತುಂಬಿದವು.
ತಾಳಕ್ಕೆ ತಕ್ಕಂತೆ ಕುದುರೆ ಕುಣಿತ, ಗೊಂಬೆಗಳು ಮೆರವಣಿಗೆಯ ಆಕರ್ಷಣೀಯವಾಗಿದ್ದವು.
ವಿದ್ಯುತ್ ಅಲಂಕಾರಿಕ ಬೆಳ್ಳಿ ರಥದಲ್ಲಿ ದೇವರದಾಸಿಮಯ್ಯ ನೂತನ ಮೂರ್ತಿ ಮೆರವಣಿಗೆ ಜರುಗಿತು.
ಸಮಾಜ ಬಾಂಧವರು ಸೇರಿದಂತೆ ನೇಕಾರ ಸಮುದಾಯದ ನೂರಾರು ಭಕ್ತರು ಭಾಗಿಯಾಗಿದ್ದರು.
Kshetra Samachara
23/04/2026 09:02 pm
LOADING...