ವಿಜಯಪುರದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯನ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನ ಆರೋಪಿಗಳನ್ನ ವಿಜಯಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಅಬುಶ್ಯಾ ಕೊಡ್ಲೇಕರ್, ಅಬಾಶ್ಯಾ ಮಾನೆ, ವಾಗೀಶ್ ಪೋಳ್, ಜಾಲಿಂದರ್ ಮಲ್ಲಾರಿ, ಖಂಡೋಬಾ ತಾಂಬೆ, ಮುರುಗು ಹಕ್ಕೆ ಎಂದು ಗುರುತಿಸಲಾಗಿದೆ.
ಏಪ್ರಿಲ್ 14 ರಂದು ಅಲಿಯಾಬಾದ್ ಇಂಡಸ್ಟ್ರಿಯಲ್ ಏರಿಯಾದಲ್ಲಿ ಅಲಿಯಾಬಾದ್ ನಿವಾಸಿ ರಾಜು ಖರೆಯನ್ನು ಟಿಪ್ಪರ್ ಡಿಕ್ಕಿ ಹೊಡೆದು, ಫೈರಿಂಗ್ ನಡೆಸಿ ಭೀಕರ ಹತ್ಯೆ ಮಾಡಲಾಗಿತ್ತು. ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡ ರಚಿಸಿದ ವಿಜಯಪುರ ಪೊಲೀಸರು ಹಂತಕರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ 2 ಕಂಟ್ರಿ ಪಿಸ್ತೂಲು, 7 ಮೊಬೈಲ್ ಫೋನ್, ಕೃತ್ಯಕ್ಕೆ ಬಳಸಿದ್ದ 2 ಬೈಕ್, 1 ಟಿಪ್ಪರ್, 1 ಕಾರ್ ವಶಕ್ಕೆ ಪಡೆಯಲಾಗಿದೆ ಆಸ್ತಿ ವಿವಾದ ಹಿನ್ನೆಲೆ ಹತ್ಯೆ ಮಾಡಲಾಗಿದೆ ಎಂದು ಎಸ್ ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.
PublicNext
24/04/2026 01:24 pm
LOADING...